ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಅಣು ಒಪ್ಪಂದ: ಕಾಂಗ್ರೆಸ್. ಎಡಪಕ್ಷಗಳ ಇನ್ನೊಂದು ಸಭೆ
ಭಾರತ ಮತ್ತು ಅಮೆರಿಕ ನಡುವಿನ ನಾಗರಿಕ ಅಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಆಡಳಿತಾರೂಡ ಕಾಂಗ್ರೆಸ್ ಮತ್ತು ಎಡಪಕ್ಷಗಳ ನಡುವೆ ಉದ್ಭವಿಸಿರುವ ಬಿಕ್ಕಟ್ಟು ಅಂತ್ಯವಾಗದ ಕಾರಣ, ಬಿಕ್ಕಟ್ಟು ಪರಿಹರಿಸುವುದಕ್ಕೆ ಅಕ್ಟೋಬರ್ 22ರಂದು ಮತ್ತೇ ಎಡ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಸಮನ್ವಯ ಸಭೆ ಸೇರಲಿದೆ.

ಅಂತಾರಾಷ್ಟ್ರೀಯ ಅಣುಶಕ್ತಿ ಪ್ರಾಧಿಕಾರದೊಂದಿಗೆ ಅಣು ಒಪ್ಪಂದದ ಕುರಿತು ಮಾತುಕತೆ ನಡೆಸಬಾರದು ಎಂದು ಎಡಪಕ್ಷಗಳು ಹೇಳುತ್ತಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳ ನಡುವೆ ನಾಲ್ಕನೆ ಬಾರಿ ಸಭೆ ನಡೆದಿದ್ದು, ಎಡಪಕ್ಷಗಳು ಮಾತ್ರ ತಮ್ಮ ಬೇಡಿಕೆಯಿಂದ ಹಿಂದೆ ಸರಿಯುವಂತೆ ಕಾಣುವಂತಿಲ್ಲ.

ಭಾರತ-ಅಮೆರಿಕ ನಡುವಿನ ಅಣು ಒಪ್ಪಂದ ನಮ್ಮ ಆದ್ಯತೆಯಾಗಿದ್ದು. ಮಧ್ಯಂತರ ಚುನಾವಣೆಯಾಗಲಿ, ಸರಕಾರವನ್ನು ಅಸ್ಥಿರಗೊಳಿಸುವುದು ನಮ್ಮ ಉದ್ದೇಶವಲ್ಲ. ಆದ್ದರಿಂದ ಒಪ್ಪಂದದ ಜಾರಿ ಕುರಿತು ಮುಂದುವರಿಯಬಾರದು ಎಂದು ಹೇಳುತ್ತಿದ್ದೆವೆ ಎಂದು ಸಿಪಿಐ(ಎಂ) ನಾಯಕ ಸಿತಾರಾಮ್ ಯೆಚೂರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಭೆಯ ನಂತರ ಮಾತನಾಡಿದ ಸಿಪಿಐ ಪ್ರಧಾನ ಕಾರ್ಯದರ್ಶಿ ಎ. ಬಿ. ಬರ್ಧನ್ ಅವರು, ಅಣುಶಕ್ತಿ ಪ್ರಾಧಿಕಾರದೊಂದಿಗೆ ಮಾತುಕತೆ ಪ್ರಾರಂಭಿಸಲು ಸಮನ್ವಯ ಸಮಿತಿ ಒಪ್ಪಿಗೆ ನೀಡುತ್ತದೆ ಎಂದು ಯೋಚಿಸಿಲ್ಲ ಎಂದು ಹೇಳಿದ್ದಾರೆ.

ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರ ನೆತೃತ್ವದಲ್ಲಿ ನಡೆದ ಸಮನ್ವಯ ಸಭೆಯಲ್ಲಿ ಸುಮಾರು 15 ಸದಸ್ಯರು ಹಾಜರಿದ್ದು, ಪ್ರತಿಯೊಬ್ಬರು ನಾಗರಿಕ ಅಣು ಒಪ್ಪಂದ, ವಿದೇಶಾಂಗ ನೀತಿ, ಮತ್ತು ರಾಷ್ಟ್ರೀಯ ಸುರಕ್ಷತೆಗೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ವಿದೇಶಾಂಗ ಸಚಿವರು ಪ್ರಧಾನಿಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದ್ದಾರೆ.

ನಾಗರಿಕ ಅಣು ಒಪ್ಪಂದದ ವಿಷಯವಾಗಿ ಇವರೆಗೆ ಮೌನವಾಗಿದ್ದ ಕೇಂದ್ರ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಅವರು, ಮೊದಲ ಬಾರಿಗೆ ಎಡಪಕ್ಷಗಳೊಂದಿಗೆ ಸೇರಿಕೊಂಡು ಅಣು ಒಪ್ಪಂದದ ಜಾರಿ ಬೇಡ ಎಂದು ಕಾಂಗ್ರೆಸ್ ಪಕ್ಷಕ್ಕೆ ಹೇಳಿದ್ದು, ಮದ್ಯಂತರ ಚುನಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಬಿಕ್ಕಟು ಪರಿಹಾರವಾಯಿತೆ ಎಂದು ಕೇಳಿದ ಪ್ರಶ್ನೆಗೆ ಬಿಕ್ಕಟ್ಟು ಇಲ್ಲವೇ ಇಲ್ಲ ಎಂದು ಬರ್ಧನ್ ಸುದ್ದಿಗಾರರ ಮಾತನ್ನು ತೆಲಿಸುವ ಪ್ರಯತ್ನ ಮಾಡಿದರು.
ಮತ್ತಷ್ಟು
ಚುನಾವಣೆ ಕಹಳೆ ಮೊಳಗಿಸಿದ ಮಾಯಾವತಿ
ದಾರಾ ಸಿಂಗ್‌ ಜಾಮೀನಿಗೆ ನಕಾರ
ಪರಮಾಣು ಬಿಕ್ಕಟ್ಟು: ಅ.22ರಂದು ಮರುಚರ್ಚೆ
ನಶಿಸುತ್ತಿರುವ ಪ್ರಾಚೀನ ಕಲಾಕೃತಿಗಳು
ಕರ್ನಾಟಕದ ಪರಿಸ್ಥಿತಿ ಚರ್ಚೆಗೆ ಕಾಂಗ್ರೆಸ್ ಸಭೆ
ಮುಂದುವರಿದ ಬ್ಲೂಲೈನ್ ಹಾವಳಿ