ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಶಾಂತಿ, ಸ್ನೇಹ ಸಂದೇಶದ "ಪೀಸ್ ಬೋಟ್"
ಶಾಂತಿ, ಸ್ನೇಹ ಮತ್ತು ಸಹನೆಯ ಸಂದೇಶದೊಂದಿಗೆ ವಿವಿಧ ರಾಷ್ಟ್ರಗಳ 1000ಕ್ಕೂ ಹೆಚ್ಚು ಪೌರರನ್ನು ಹೊತ್ತ ಜಪಾನ್‌ನ "ಶಾಂತಿ ದೋಣಿ" ಬುಧವಾರ ಇಲ್ಲಿಗೆ ಆಗಮಿಸಿತು. 997 ಜಪಾನಿಯರು, 10 ದಕ್ಷಿಣ ಕೊರಿಯನ್ನರು, 6 ನ್ಯೂಜಿಲೆಂಡ್ ಪೌರರು, 6 ಬ್ರಿಟನ್ನರು, ಮೂರು ಆಸ್ಟ್ರೇಲಿಯನ್ನರು, ಇಬ್ಬರು ಕೆನಡಿಯನ್ನರು ಮತ್ತು ಒಬ್ಬ ಜರ್ಮನ್, ಒಬ್ಬ ಈಕ್ವಿಡೋರಿಯನ್ ಮತ್ತು ಮೆಕ್ಸಿಕನ್ ಪೌರನನ್ನು ಹೊಂದಿದ ಶಾಂತಿ ದೋಣಿಯು ಬೆಳಿಗ್ಗೆ 8 ಗಂಟೆಗೆ ಆಗಮಿಸಿತೆಂದು ಸ್ಥಳೀಯ ಸಂಘಟಕ ಸಂತೋಷ್ ಕುಮಾರ್ ಹೇಳಿದ್ದಾರೆ.

ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ ಸದಸ್ಯರ ಭೇಟಿ, ಸರೋವರಮ್ ಹೊಟೆಲ್‌ನಲ್ಲಿ ಆರ್ಟ್ ಆಫ್ ಲಿವಿಂಗ್ ಸದಸ್ಯರ ಜತೆ ಯೋಗದ ಸಮಾವೇಶ, ಪೆರೇಡ್ ಮೈದಾನದಲ್ಲಿ ಸ್ನೇಹಭಾವದ ಫುಟ್‌ಬಾಲ್ ಪಂದ್ಯ ಸೇರಿದಂತೆ ಶಾಂತಿ ದೂತರಿಗೆ ಅನೇಕ ಚಟುವಟಿಕೆಗಳು ಕಾದಿದ್ದವು. ಕೊಚ್ಚಿಗೆ ಪ್ರಕೃತಿವೀಕ್ಷಣೆ ಪ್ರವಾಸ, ಭಾರತೀಯ ಉಡುಪುಗಳ ಫ್ಯಾಷನ್ ಶೋ ಮುಂತಾದುವಕ್ಕೆ ಅವರು ಭೇಟಿ ನೀಡಲಿದ್ದಾರೆ.

ಪೀಸ್ ಬೋಟ್ ಜಪಾನ್ ಮೂಲದ ಅಂತಾರಾಷ್ಟ್ರೀಯ ಸಂಘಟನೆಯಾಗಿದ್ದು 30,000 ಟನ್ ತೂಕದ ಹಡಗಿನಲ್ಲಿ ವಿಶ್ವಾದ್ಯಂತ ಪ್ರವಾಸ ಕೈಗೊಂಡಿದ್ದು, ಹಡಗಿನ ಬದಿಯಲ್ಲಿ ದೊಡ್ಡ ಅಕ್ಷರಗಳಲ್ಲಿ "ಪೀಸ್ ಬೋಟ್" ಎಂದು ಬಣ್ಣದಲ್ಲಿ ಬರೆಯಲಾಗಿದೆ. ಇದು ಹಡಗಿನ 59ನೇವಿಶ್ವ ಯಾತ್ರೆಯಾಗಿದೆ. 2007, ಸೆ.23ರಂದು ಟೋಕಿಯೊದಿಂದ ಆರಂಭವಾದ ಈ ಯಾತ್ರೆ 2008 ಜ.10ರಂದು ಜಪಾನ್‌ಗೆ ಮರಳಲಿದೆ.
ಮತ್ತಷ್ಟು
ತಾಜ್ ಕಾರಿಡಾರ್:ಸುಪ್ರೀಂಕೋರ್ಟ್ ನಕಾರ
ಅಣು ಒಪ್ಪಂದ: ಕಾಂಗ್ರೆಸ್. ಎಡಪಕ್ಷಗಳ ಇನ್ನೊಂದು ಸಭೆ
ಚುನಾವಣೆ ಕಹಳೆ ಮೊಳಗಿಸಿದ ಮಾಯಾವತಿ
ದಾರಾ ಸಿಂಗ್‌ ಜಾಮೀನಿಗೆ ನಕಾರ
ಪರಮಾಣು ಬಿಕ್ಕಟ್ಟು: ಅ.22ರಂದು ಮರುಚರ್ಚೆ
ನಶಿಸುತ್ತಿರುವ ಪ್ರಾಚೀನ ಕಲಾಕೃತಿಗಳು