ರಾಷ್ಟ್ರದ ಪ್ರಮುಖ ವೈದ್ಯ ವಿಜ್ಞಾನ ಸಂಸ್ಥೆ ಎಂದು ಪ್ರಖ್ಯಾತಿ ಪಡೆದಿರುವ ಅಖಿಲ ಭಾರತೀಯ ವೈದ್ಯ ವಿಜ್ಞಾನ ಸಂಸ್ಥೆಯಲ್ಲಿ 75 ವರ್ಷದ ರೋಗಿಯೊಬ್ಬನ ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ವೈದ್ಯರ ನಿರ್ಲಕ್ಷ್ಯದ ಕಾರಣ ರೋಗಿಯ ಹೃದಯದಲ್ಲಿ ಸ್ಕ್ರೂ ಒಂದು ಉಳಿದ ಪರಿಣಾಮವಾಗಿ ಮೃತಪಟ್ಟಿದ್ದು. ಶಸ್ತ್ರಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ಎಸಗಿದ ವೈದ್ಯನನ್ನು ಅಮಾನತುಗೊಳಿಸಲಾಗಿದೆ.
ಅಖಿಲ ಭಾರತೀಯ ವೈದ್ಯ ವಿಜ್ಞಾನ ಸಂಸ್ಥೆಯಲ್ಲಿ 75 ವರ್ಷದ ಹೃದಯ ರೋಗಿಯೋರ್ವನ ಬೈಪಾಸ್ ಶಸ್ತ್ರ ಚಿಕಿತ್ಸೆ ನೆರೆವೆರಿಸುವ ಸಮಯದಲ್ಲಿ ಹೃದಯದಲ್ಲಿ ಸ್ಕ್ರೂ ಒಂದನ್ನು ಬಿಟ್ಟು ರೋಗಿಯ ಸಾವಿಗೆ ಕಾರಣರಾಗಿದ್ದಾರೆ.
ಭಾರತದ ಪ್ರಮುಖ ವೈದ್ಯವಿಜ್ಞಾನ ಸಂಸ್ಥೆಗಳಲ್ಲಿ ಒಂದು ಎಂದು ಹೆಸರು ಪಡೆದಿರುವ ಎಐಐಎಂಎಸ್‌ನ ವೈದ್ಯರು ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ತೋರಿದ ನಿರ್ಲಕ್ಷ್ಯದಿಂದ ರೋಗಿ ಸತ್ತಿದ್ದಾನೆ ಎಂದು ಆಪಾದಿಸಲಾಗಿದೆ.
ಕಳೆದ ಎರಡು ತಿಂಗಳ ಅವಧಿಯಲ್ಲಿ ಎರಡನೆ ಬಾರಿ ವೈದ್ಯರ ನಿರ್ಲಕ್ಷ್ಯದಿಂದ ರೋಗಿಗಳ ಸಾವು ಸಂಭವಿಸಿದೆ ಎಂದು ಹೇಳಲಾಗಿದೆ. ಆದರೆ ಎಐಐಎಂಎಸ್ ಪ್ರಕಾರ ಬುಧವಾರ ಸಂಭವಿಸಿದ ರೋಗಿಯ ಸಾವು ಹೃದಯದ ತೊಂದರೆಯ ಪರಿಣಾಮವಾಗಿ ಸಂಭವಿಸಿಲ್ಲ ಬದಲಾಗಿ ದೇಹದ ಇತರ ಅಂಗಗಳ ವೈಫಲ್ಯದಿಂದಾಗಿ ಸಂಭವಿಸಿದೆ ಎಂದು ವಾದಿಸಿದ್ದಾರೆ.
75 ವರ್ಷದ ವೃದ್ದ ಗೋಕುಲ್ ಪ್ರಸಾದ್ ಅವರ ಸಾವಿಗೆ ಸಂಬಂಧಿಸಿದಂತೆ ವಿಚಾರಣೆಯನ್ನು ನಡೆಸಲಾಗುವುದು ಎಂದು ಅಲ್ಲಿನ ಆಡಳಿತ ವರ್ಗ ಹೇಳಿದೆ. ಗೋಕುಲ್ ಪ್ರಸಾದ್ ಅವರು ಜುಲೈ 28ರಂದು ಹೃದಯ ರೋಗ ಚಿಕಿತ್ಸಾ ವಿಭಾಗಕ್ಕೆ ಮೂತ್ರಕೋಶ ವೈಫಲ್ಯ, ಹೃದಯ ವೈಫಲ್ಯ, ಮತ್ತು ಚರ್ಮರೋಗ ಸೋಂಕಿನ ಕಾರಣ ದಾಖಲಾಗಿದ್ದರು.
ರೋಗಿಯ ಪರೀಶಿಲನೆಯ ನಿರಂತರ ತಪಾಸಣೆಯ ನಂತರ ಬೈಪಾಸ್ ಶಸ್ತ್ರ ಚಿಕಿತ್ಸೆಗೆ ಸಲಹೆ ಮಾಡಲಾಗಿತ್ತು. ಸಲಹೆ ನೀಡುವ ಸಮಯದಲ್ಲಿ ಅತಿ ಅಪಾಯಕರ ಎಂದು ರೋಗಿಗೆ ಹೇಳಲಾಗಿತ್ತು ಎಂದು ವೈದ್ಯರು ಹೇಳಿದ್ದು, ಆದರೂ ಗೋಕುಲ್ ಪ್ರಸಾದ್ ಅವರು ಶಸ್ತ್ರ ಚಿಕಿತ್ಸೆಗೆ ಒಪ್ಪಿದ್ದರು.
ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ಬೈಪಾಸ್ ಸರ್ಜರಿಗೆ ಬಳಸಲಾಗುವ ರಿಟ್ರಾಕ್ಟರ್ ಎಂಬ ಉಪಕರಣದ ಸ್ಕ್ರೂ ಹೃದಯದಲ್ಲಿ ಉಳಿದುಕೊಂಡಿತು. ಮೂರು ದಿನಗಳ ನಂತರ ರೋಗಿಯು ಹೃದಯದಿಂದ ಸ್ಕ್ರೂವನ್ನು ಆಯಸ್ಕಾಂತದ ಸಹಾಯದಿಂದ ತೆಗೆದು, ಮೂರು ದಿನಗಳ ನಂತರ ಗೋಕುಲ್ ಪ್ರಸಾದ್ ಅವರನ್ನು ಮನೆಗೆ ಕಳುಹಿಸಿಕೊಡಲಾಯಿತು.
ಪುನಃ ಮೂರು ದಿನಗಳ ನಂತರ ಗೋಕುಲ್ ಪ್ರಸಾದ್ ಅವರಿಗೆ ತೀವ್ರವಾದ ಆಲರ್ಜಿ ಸಮಸ್ಯೆ ಉಂಟಾಗಿದ್ದರಿಂದ ಪುನಃ ಆಸ್ಪತ್ರೆಯಲ್ಲಿ ದಾಖಲಾಗಿ ಸೆಪ್ಟಂಬರ್ 11 ರಂದು ಆಸ್ಪತ್ರೆಯಲ್ಲಿ ಮೃತರಾದರು.
|