ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಚುನಾವಣೆ ಸಾಧ್ಯತೆಯೇ ಇಲ್ಲ: ಲಾಲೂ
ಎಡಪಕ್ಷ ಮತ್ತು ಕಾಂಗ್ರೆಸ್ ನಡುವೆ ಉದ್ಭವಿಸಿರುವ ಅಣು ಒಪ್ಪಂದದ ವಿವಾದದ ಕಾರಣ ಲೋಕಸಭೆಗೆ ಮದ್ಯಂತರ ಚುನಾವಣೆ ನಡೆಯುವ ಸಾಧ್ಯತೆ ಇಲ್ಲ ಎಂದು ಕೇಂದ್ರ ರೈಲ್ವೆ ಸಚಿವ ಲಾಲೂ ಪ್ರಸಾದ್ ಅವರು ಸ್ಪಷ್ಟಪಡಿಸಿದ್ದಾರೆ.

ಎಡಪಕ್ಷಗಳು ಎತ್ತಿರುವ ಸಂಶಯ ಮತ್ತು ವಿವರಣೆಗಳಿಗೆ ಸೂಕ್ತ ಸಮಯದಲ್ಲಿ ಗಮನ ನೀಡಲಾಗುವುದು ಎಂದು ಅವರು ಹೇಳಿದ್ದು, ರಾಷ್ಟ್ರದಲ್ಲಿನ ಯಾವುದೇ ಪಕ್ಷ ಮದ್ಯಂತರ ಚುನಾವಣೆಗೆ ಸಿದ್ದವಿಲ್ಲ.

ಎಡ ಮತ್ತು ಯುಪಿಎ ನಡುವೆ ಉದ್ಭವಿಸಿರುವ ಬಿಕ್ಕಟ್ಟನ್ನು ಪರಿಹರಿಸುವುದಕ್ಕೆ ಸಂಧಾನಕಾರರಾಗಿ ನೇಮಕ ಕೇಂದ್ರ ರೈಲ್ವೆ ಸಚಿವ ಲಾಲೂ ಪ್ರಸಾದ್ ಅವರು, ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವುದಕ್ಕೆ ನಡೆದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ಅವರು, ಅಕ್ಟೋಬರ್ 22 ರಂದು ಮತ್ತೋಂದು ಎಡ ಮತ್ತು ಯುಪಿಎ ಸಭೆ ನಡೆಯಲಿದ್ದು, ಸಭೆಯಲ್ಲಿ ಒಪ್ಪಂದಕ್ಕೆ ಸಂಬಂಧಪಟ್ಟಂತೆ ಎಡಪಕ್ಷಗಳ ಕಳವಳವನ್ನು ಪರಿಹರಿಸುವುದಕ್ಕೆ ಪ್ರಯತ್ನಿಸುವ ಸಾದ್ಯತೆ ಇದೆ.

123 ಅಣು ಒಪ್ಪಂದದ ಜಾರಿ ಬೇಡ ಎಂದು ಎಡಪಕ್ಷಗಳು ಹೇಳಿದ್ದು, ಅಣು ಒಪ್ಪಂದ ಜಾರಿಯಿಂದ ಭಾರತದ ಸಾರ್ವಭೌಮತೆಗೆ ದಕ್ಕೆ ಬರಲಿದೆ ಎಂದು ಅವುಗಳು ವ್ಯಕ್ತಪಡಿಸಿರುವ ಕಳವಳದಲ್ಲಿ ಯಾವುದೇ ಹುರುಳಿಲ್ಲ. ಒಪ್ಪಂದ ಕೇವಲ ವಿದ್ಯುತ್ ಶಕ್ತಿಯ ಉತ್ಪಾದನೆಗೆ ಮಾತ್ರ ಸಿಮಿತವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕೇಲ ವರ್ಷಗಳ ಹಿಂದೆ ಜಾರ್ಜ್ ಬುಷ್ ವಿರುದ್ಧ ರಾಲಿ ಆಯೋಜಿಸಿ ಇತರ ದೇಶಗಳ ಮೇಲಿನ ಅಮೆರಿಕದ ದಬ್ಬಾಳಿಕೆಯನ್ನು ಖಂಡಿಸಿದ್ದೆನೆ. ಹೀಗಾಗಿ ಅಮೆರಿಕ ಪರ ನಾನು ವಾಲುವ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎಂದು ಹೇಳಿದರು.
ಮತ್ತಷ್ಟು
ರೋಗಿಯ ಹೃದಯದಲ್ಲಿ ಸ್ಕ್ರೂ ಬಿಟ್ಟ ವೈದ್ಯರು
ಕಫೀಲ್ ಅಹ್ಮದ್ ಗುರುತು ಪತ್ತೆ
ಗುಜರಾತ್, ಹಿಮಾಚಲಪ್ರದೇಶದ ಚುನಾವಣಾ ವೇಳಾಪಟ್ಟಿ ಘೋಷಣೆ
ಮಧ್ಯಂತರ ಚುನಾವಣೆ ತಳ್ಳಿಹಾಕಿದ ಕಾಂಗ್ರೆಸ್
ಗುಜರಾತ್, ಹಿ. ಪ್ರ ಚುನಾವಣೆ ಪ್ರಕಟ
ಶಾಂತಿ, ಸ್ನೇಹ ಸಂದೇಶದ "ಪೀಸ್ ಬೋಟ್"