ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಸುವಂತೆ ಆರ್‌ಜೆಡಿ ವರಿಷ್ಠ ಮತ್ತು ರೈಲ್ವೆ ಸಚಿವ ಲಾಲು ಪ್ರಸಾದ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಆಗ್ರಹಿಸಿದ್ದು, ಚುನಾವಣೆ ನಡೆದರೆ ಅವರನ್ನು ಬೌಂಡರಿಯ ಆಚೆ ಸಿಕ್ಸರ್ ಬಾರಿಸಿದಂತೆ ಎಸೆಯುವುದಾಗಿ ಅವರು ಹೇಳಿದರು.
ವಿರೋಧಿಗಳನ್ನು ಶೂನ್ಯಕ್ಕೆ ಔಟ್ ಮಾಡುವುದಾಗಿ ಜಂಬ ಕೊಚ್ಚಿಕೊಳ್ಳುವ ನಿತೀಶ್ ಕುಮಾರ್ ವಿಧಾನಸಭೆ ಚುನಾವಣೆಯಲ್ಲಿ ಸ್ವತಃ ಬೌಂಡರಿಯಾಚೆ ಹೋಗಲಿದ್ದಾರೆ ಎಂದು ಹೇಳಿದರು.
ರಾಷ್ಟ್ರದಲ್ಲಿ ಮಧ್ಯಂತರ ಚುನಾವಣೆಯ ಸಾಧ್ಯತೆಯನ್ನು ತಳ್ಳಿಹಾಕಿದ ಅವರು ರಾಜಕೀಯ ಪಕ್ಷಗಳು ನಿರ್ಧರಿಸಿದಂತೆ ಅದು ಸಕಾಲದಲ್ಲಿ ನಡೆಯುವುದೆಂದು ಹೇಳಿದರು. ಬಿಹಾರದ ಎನ್‌ಡಿಎ ಸರ್ಕಾರ ಗುತ್ತಿಗೆ ಸರ್ಕಾರ ಎಂದು ತಳ್ಳಿಹಾಕಿದ ಅವರು, ಕೇಸರಿ ಬ್ರಿಗೇಡ್ ಮತ್ತು ಕೋಮುವಾದಿ ಶಕ್ತಿಗಳ ನೆರವನ್ನು ನಿತೀಶ್ ಕುಮಾರ್ ಪಡೆಯುತ್ತಿದ್ದಾರೆಂದು ಹೇಳಿದರು.
|