ಭಾರತ ಮತ್ತು ಆಸ್ಟ್ರೇಲಿಯ ನಡುವೆ ಅಪರಾಧಿಗಳ ಹಸ್ತಾಂತರ ಒಪ್ಪಂದಕ್ಕೆ ಸಹಿ ಹಾಕುವುದಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಒಪ್ಪಂದದ ಮುಖ್ಯ ಲಕ್ಷಣಗಳು ಹಸ್ತಾಂತರಕ್ಕೆ ಹೊಣೆಗಾರಿಕೆ ,ಹಸ್ತಾಂತರ ಮಾಡಬಹುದಾದ ಅಪರಾಧಗಳು, ಜಂಟಿ ಅಪರಾಧಗಳು, ನಿರಾಕರಣೆಗೆ ಕಾರಣಗಳು, ರಾಷ್ಟ್ರೀಯರ ಹಸ್ತಾಂತರ, ಹಸ್ತಾಂತರ ನಿಯಮಗಳು ಮುಂತಾದವು ಸೇರಿವೆ.
ಭಯೋತ್ಪಾದಕರು, ಆರ್ಥಿಕ ಅಪರಾಧಿಗಳು ಮತ್ತಿತರ ಕ್ರಿಮಿನಲ್‌ಗಳನ್ನು ಆಸ್ಟ್ರೇಲಿಯಕ್ಕೆ ಅಥವಾ ಆಸ್ಟ್ರೇಲಿಯದಿಂದ ಹಸ್ತಾಂತರ ಕೋರಲು ಕಾನೂನು ಚೌಕಟ್ಟನ್ನು ಈ ಒಪ್ಪಂದ ಒದಗಿಸುತ್ತದೆ.
ಆರೋಗ್ಯ ಮತ್ತು ಔಷಧಿ ಕ್ಷೇತ್ರದಲ್ಲಿ ಭಾರತ ಮತ್ತು ಪೋಲೆಂಡ್ ನಡುವೆ ಒಪ್ಪಂದಕ್ಕೆ ಸಹಿ ಹಾಕುವುದಕ್ಕೆ ಕೂಡ ಕ್ಯಾಬಿನೆಟ್ ಅನುಮೋದನೆ ನೀಡಿದೆ. ತಾಯಿ ಮತ್ತು ಮಗುವಿನ ಆರೋಗ್ಯ, ಕುಟುಂಬ ಯೋಜನೆ, ಸಾರ್ವಜನಿಕ ಆರೋಗ್ಯ, ನರ್ಸಿಂಗ್, ಸೋಂಕು ರೋಗಗಳು, ಔಷಧಿ ಸಂಶೋಧನೆ, ಔಷಧೋಪಕರಣಗಳು ಮುಂತಾದ ಕ್ಷೇತ್ರಗಳಲ್ಲಿ ಸಹಕಾರಕ್ಕೆ ಒಪ್ಪಂದ ಒಳಗೊಂಡಿದೆ.
|