ಉತ್ತರ ಕಾಶ್ಮೀರದ ಸೇನಾ ಕ್ಯಾಂಟೀನ್‌ನಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದ ಸ್ಫೋಟದಲ್ಲಿ 7 ಮಂದಿ ಸೈನಿಕರು ಮತ್ತು ಇಬ್ಬರು ನಾಗರಿಕರು ಸತ್ತಿದ್ದು ಹಲವಾರು ಮಂದಿ ಗಾಯಗೊಂಡಿದ್ದಾರೆ.ಶುಕ್ರವಾರದಿಂದ ಮೂರು ದಿನಗಳ ಏಕಪಕ್ಷೀಯ ಕದನವಿರಾಮ ಘೋಷಿಸಿದ ಹಿಜ್ಬುಲ್ ಮುಜಾಹಿದ್ದೀನ್ ಈ ಸ್ಫೋಟಕ್ಕೆ ಹೊಣೆ ಹೊತ್ತಿದೆ.
ಆದರೆ ಶ್ರೀನಗರದಲ್ಲಿರುವ ರಕ್ಷಣಾ ವಕ್ತಾರರೊಬ್ಬರು ಕ್ಯಾಂಟೀನ್ ಘಟನೆಯು ಅನಿಲ ಸಿಲಿಂಡರ್ ಸ್ಫೋಟದಿಂದ ಉಂಟಾಗಿದ್ದು ಇಬ್ಬರು ನಾಗರಿಕರು ಸತ್ತಿದ್ದಾರೆ ಮತ್ತು ನಾಲ್ವರು ಸೈನಿಕರು ಗಾಯಗೊಂಡಿದ್ದಾರೆಂದು ಹೇಳಿದರು. ಸ್ಫೋಟದಿಂದ ಕಟ್ಟಡದ ಒಂದು ಭಾಗ ನೆಲಸಮವಾಗಿದ್ದು ಅದರ ಅವಶೇಷವನ್ನು ತೆಗೆದ ಬಳಿಕ ಸತ್ತವರ ನಿಖರ ಸಂಖ್ಯೆ ಗೊತ್ತಾಗುತ್ತದೆ ಎಂದು ವಕ್ತಾರ ಹೇಳಿದರು.
|