ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಬಾಲಪ್ರತಿಭೆಯಿಂದ ಹೊಲಿಗೆ ತರಬೇತಿ
ನೆರೆಮನೆಯ ಮಕ್ಕಳೊಂದಿಗೆ ಆಟವಾಡಿಕೊಂಡು ಇರಬೇಕಾಗಿದ್ದ ವಯಸ್ಸಿನ ಈ ಐದು ವರ್ಷ ಪ್ರಾಯದ ಪುಟ್ಟ ಪೋರಿ ತನ್ನ ತಾಯಿಯ ವಯಸ್ಸಿನ ಮಹಿಳಾ ಶಿಕ್ಷಣಾರ್ಥಿಗಳಿಗೆ ಹೊಲಿಗೆ ಕಲಿಸಿಕೊಡುತ್ತಿದ್ದಾಳೆಂದರೆ ನಂಬಲು ಸಾಧ್ಯವೇ?

ಆದರೆ ನಂಬಲೇ ಬೇಕಾದಂತ ವಿಷಯ. ಉತ್ತರಪ್ರದೇಶದ ಮಿರ್ಜಾಪುರದಲ್ಲಿ ಐದು ವರ್ಷದ ಬಾಲ ಪ್ರತಿಭೆ ಶೀಲು ಮಿಶ್ರಾ ಎಲ್‌ಕೆಜಿಯಲ್ಲಿ ಓದುತ್ತಿದ್ದರೂ, ತನ್ನ ಕುಟುಂಬದ ಪೋಷಣೆಯ ಜವಾಬ್ದಾರಿ ಹೊತ್ತಿದ್ದಾಳೆ. ತನಗಿಂತ ದೊಡ್ಡ ಮಕ್ಕಳಿಗೆ, ಮಹಿಳೆಯರಿಗೆ ಪ್ರತಿದಿನ 2 ಗಂಟೆಗಳ ಕಾಲ ಟೈಲರಿಂಗ್ ತರಬೇತಿ ಕೊಡುತ್ತಾಳೆ.

ಟೈಲರಿಂಗ್ ಕೇಂದ್ರದಲ್ಲಿ ಅವಳ ತಾಯಿ ಆಶಾ ಹೊಲಿಗೆ ಕೌಶಲ್ಯವನ್ನು ಕಲಿಸುವಾಗ ಶೀಲು ಆಸಕ್ತಿಯಿಂದ ಗಮನಿಸುತ್ತಾ, ತಾನೂ ಕಲಿತಿದ್ದಳು. ಈಗ ಅವಳು ರವಿಕೆ. ಪೆಟಿಕೋಟ್, ಒಳಉಡುಪು, ಫ್ರಾಕ್, ಪೈಜಾಮಾ, ಪ್ಯಾಂಟ್ ಮತ್ತು ಶರ್ಟ್ ಎಲ್ಲವನ್ನೂ ಹೊಲಿಯುತ್ತಾಳೆ.

ಸುಮಾರು ಒಂದು ವರ್ಷದಿಂದ ಶೀಲು ಈ ಹೊಲಿಗೆ ಬೋಧನಾ ಕಾಯಕದಲ್ಲಿ ನಿರತಳಾಗಿದ್ದಾಳೆ. ಶೀಲು ತಾಯಿ ಆಶಾಗೆ ತನ್ನ ಮಗಳು ಅಷ್ಟೊಂದು ಸಣ್ಣ ಪ್ರಾಯದಲ್ಲೇ ಹೊಲಿಗೆ ಕಲಿತಿದ್ದು ಸಂತೋಷ ಉಂಟುಮಾಡಿದೆ. ನನಗೆ ಅನಾರೋಗ್ಯವಾದಾಗ ಟೈಲರಿಂಗ್ ಕೇಂದ್ರ ನಡೆಸುವುದು ಹೇಗಪ್ಪಾ ಎಂದು ಚಿಂತೆಯಾಗಿತ್ತು,

ಆಗ ಶೀಲು ತಾನು ಟೈಲರಿಂಗ್ ಕೇಂದ್ರ ನಡೆಸುವುದಾಗಿ ಹೇಳಿದಳು. ನೀನು ಹೇಗೆ ಮಾಡುತ್ತೀಯ ಎಂದು ಕೇಳಿದಾಗ ನಾನು ಯಾವುದನ್ನು ಬೇಕಾದರೂ ಹೊಲಿಯುತ್ತೇನೆಂದು ಹೇಳಿ ಪೇಪರ್‌ನಲ್ಲಿ ಕಟಿಂಗ್ ಮಾಡಿದಾಗ ನಾನು ಆಶ್ಚರ್ಯಚಕಿತನಾದೆ ಎಂದು ಆಶಾ ಹೇಳುತ್ತಾಳೆ.

ಆಕೆಯ ಮೇಲೆ ತಮಗೆ ಸಂಪೂರ್ಣ ಭರವಸೆ ಇಟ್ಟಿದ್ದು, ಮಗುವಿನಿಂದ ಹೊಲಿಗೆ ಕೌಶಲ್ಯ ಕಲಿಯುವುದಕ್ಕೆ ನಮಗೆ ನಾಚಿಕೆಯೇನೂ ಇಲ್ಲವೆಂದು ವಿದ್ಯಾರ್ಥಿನಿಯರು ಹೇಳಿದ್ದಾರೆ.

ಪ್ರಸಕ್ತ ಶೀಲು 12ರಿಂದ 42ರ ವಯೋಮಿತಿಯ 24 ಬಾಲಕಿಯರು, ಮಹಿಳೆಯರಿಗೆ ತರಬೇತಿ ಕೊಡುತ್ತಾಳೆ. ಪ್ರತಿ ವಿದ್ಯಾರ್ಥಿನಿಗೆ 50 ರೂ. ಶುಲ್ಕ ವಿಧಿಸುವ ಆಕೆ ನೋಂದಣಿ ಶುಲ್ಕವಾಗಿ 65 ರೂ. ಪಡೆಯುತ್ತಾಳೆ.
ಮತ್ತಷ್ಟು
ಕ್ಯಾಂಟೀನ್ ಸ್ಫೋಟ:7 ಸಾವು
ಭಾರತ-ಆಸ್ಟ್ರೇಲಿಯ ಹಸ್ತಾಂತರ ಒಪ್ಪಂದ
ಕೇಂದ್ರ ಸರ್ಕಾರ ಉರುಳುವುದಿಲ್ಲ:ಪವಾರ್
ಸಿಕ್ಸರ್‌ನಂತೆ ನಿತೀಶ್‌ರನ್ನು ಎಸೆಯುವೆ:ಲಾಲೂ
"ಜೀವಿತೋಂ ಕಾ ಶ್ರದ್ಧಾಂಜಲಿ" ಕಾರ್ಯಕ್ರಮ
ಚುನಾವಣೆ ಸಾಧ್ಯತೆಯೇ ಇಲ್ಲ: ಲಾಲೂ