ಮುಸ್ಲಿಮರ ಪವಿತ್ರ ಸ್ಥಳವಾದ ಅಜ್ಮೀರ್ ಖಾಜಾ ಮೊಯಿನೊದ್ದೀನ್ ಚಿಸ್ತಿ ದರ್ಗಾದ ಆವರಣದಲ್ಲಿ ನಡೆದ ಬಾಂಬ್ ದಾಳಿಯು ಉಗ್ರಗಾಮಿಗಳು ನಡೆಸಿದ ಅತ್ಯಂತ ಹೇಯ ಕೃತ್ಯವಾಗಿದೆ ಎಂದು ಯುಪಿಎ ಅಧ್ಯಕ್ಷ ಸೋನಿಯಾ ಗಾಂಧಿ ಖಂಡಿಸಿದ್ದಾರೆ.
ಘಟನೆ ನಡೆದ ಈ ಪವಿತ್ರ ಸ್ಥಳದಲ್ಲಿ ಸೋನಿಯಾ ಗಾಂಧಿ ದುಃಖ ಮತ್ತು ಸಂಕಟ ವ್ಯಕ್ತಪಡಿಸಿದರು.
ಇದು ಶತ್ರುರಾಷ್ಟ್ರಗಳು ನಡೆಸಿದ ಅತ್ಯಂತ ಹೇಯ ಕೃತ್ಯವಾಗಿದೆ ಎಂದು ಸೋನಿಯಾ ಹೇಳಿದ್ದಾರೆ.
ಸಾವಿರಾರು ಮುಸ್ಲಿಮರು ತಮ್ಮ ರಂಜಾನ್ ಉಪವಾಸವನ್ನು ತ್ಯಜಿಸುತ್ತಿರುವ ಸಮಯದಲ್ಲಿ ಉಗ್ರಾಗಾಮಿಗಳು ಅಡಗಿಸಿದ್ದ ಬಾಂಬ್ ಸ್ಫೋಟಗೊಂಡಿತು.
ಶಾಲಾಚೀಲದಲ್ಲಿ ಅಡಗಿಸಿದ್ದ ಬಾಂಬ್ ಸ್ಫೋಟಗೊಂಡ ಕೂಡಲೇ ಎಲ್ಲರೂ ಭಯಭೀತರಾಗಿ ಓಡುವ ಸಂದರ್ಭದಲ್ಲಿ ಕಾಲ್ತುಳಿತದಿಂದಾಗಿ ಅನೇಕರಿಗೆ ಗಾಯಗಳಾಗಿವೆ.
|