ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಕರ್ನಾಟಕದಲ್ಲಿ ಚುನಾವಣೆಯೊಂದೆ ಪರಿಹಾರ: ಯೆಚೂರಿ
ಅತಂತ್ರ ರಾಜಕೀಯ ಪರಸ್ಥಿತಿ ತಲೆದೋರಿ, ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿಸಿಕೊಂಡಿರುವ ಕರ್ನಾಟಕದಲ್ಲಿ, ನೀತಿಬಾಹಿರ ಕುದುರೆ ವ್ಯಾಪಾರವನ್ನು ತಡೆಗಟ್ಟಬೇಕೆಂದರೆ ಚುನಾವಣೆಯೊಂದೆ ಪರಿಹಾರ ಎಂದು ಸಿಪಿಐ (ಎಂ)ನ ಹಿರಿಯ ನಾಯಕ ಸಿತಾರಾಂ ಯೆಚೂರಿ ಅಭಿಪ್ರಾಯಪಟ್ಟಿದ್ದಾರೆ.

"ಕೊನೆಯ ಗಳಿಗೆಯಲ್ಲಿಯೂ ಸಹ ಅವಕಾಶವಾದಿಗಳು, ಕುದುರೆ ವ್ಯಾಪಾರದ ಮೂಲಕ ಮತ್ತೆ ಸರಕಾರ ರಚಿಸುವ ಯತ್ನಕ್ಕೆ ಕೈ ಹಾಕಿದ್ದಾರೆ ಎಂದು ತಿಳಿಸಿದ ಅವರು, ರಾಜ್ಯವನ್ನು ಮತ್ತೆ ಸುರಕ್ಷಿತ ಪ್ರಜಾಪ್ರಭುತ್ವದಡಿಯಲ್ಲಿ ತರಬೇಕಾದರೆ ಚುನಾವಣೆಯೊಂದೆ ಪರಿಹಾರ" ಎಂದವರು ಸಿಪಿಐ-ಎಂ ಪಾಲಿಟ್ ಬ್ಯೂರೊ ಸಭೆಯಲ್ಲಿ ತಿಳಿಸಿದರು.

ಕರ್ನಾಟಕದಲ್ಲಿ ಈ ಹಿಂದೆ ಹಲವು ಬಾರಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂದಿದ್ದನ್ನು ನೆನಪಿಸಿದ ಅವರು, ರಾಜ್ಯದಲ್ಲಿ ಬಿಜೆಪಿ ಮುಖ್ಯಮಂತ್ರಿ ಸ್ಥಾನಕ್ಕೇರುವ ಕನಸನ್ನು ಮತ್ತೆ ಕನಸನ್ನಾಗಿಯೆ ಉಳಿಸಿಕೊಂಡಿತು ಎಂದು ಅವರು ಹೇಳಿದರು.

ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮುರಿದುಬಿದ್ದ ಹಿನ್ನಲೆಯಲ್ಲಿ, ರಾಜ್ಯದಲ್ಲಿ ಎರಡು ದಿನಗಳ ಹಿಂದೆ ರಾಷ್ಟ್ರಪತಿ ಆಳ್ವಿಕೆ ಜಾರಿಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು

ಕರ್ನಾಟಕ ರಾಜ್ಯದಲ್ಲಿ ಪ್ರಜಾಪ್ರಭುತ್ವನ್ನು ಜಾರಿಗೊಳಿಸಿ, ಜನತೆಗೆ ಮತ್ತೆ ಪ್ರಜಾಪ್ರಭುತ್ವದ ಹಕ್ಕುಗಳು ಸಿಗಬೇಕಾದರೆ, ಅಲ್ಲಿ ಮಧ್ಯಂತರ ಚುನಾವಣೆಯೊಂದೆ ಪರಿಹಾರ ಕಾರ್ಯ ಎಂದವರು ಹೇಳಿದ್ದಾರೆ.
ಮತ್ತಷ್ಟು
ಅಜ್ಮೀರ್ ಬಾಂಬ್ ಸ್ಫೋಟ:ಸೋನಿಯಾ ಖಂಡನೆ
ಅಜ್ಮೀರ್ ದರ್ಗಾದಲ್ಲಿ ಬಾಂಬ್ ಸ್ಪೋಟ: 3 ಸಾವು
ಬಾಲಪ್ರತಿಭೆಯಿಂದ ಹೊಲಿಗೆ ತರಬೇತಿ
ಕ್ಯಾಂಟೀನ್ ಸ್ಫೋಟ:7 ಸಾವು
ಭಾರತ-ಆಸ್ಟ್ರೇಲಿಯ ಹಸ್ತಾಂತರ ಒಪ್ಪಂದ
ಕೇಂದ್ರ ಸರ್ಕಾರ ಉರುಳುವುದಿಲ್ಲ:ಪವಾರ್