ಸೂಫಿ ಸಂತ ಖ್ವಾಜಾ ಮೊಯಿನುದ್ದಿನ್ ಚಿಸ್ತಿ, ದರ್ಗಾದಲ್ಲಿ ಸಂಭವಿಸಿದ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿದಂತೆ ರಾಜಸ್ತಾನಿ ಪೊಲೀಸರು ದರ್ಗಾಕ್ಕೆ ಬಂದಿರುವ ಕೆಲ ಪ್ರವಾಸಿಗರ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದು, ಬಾಂಗ್ಲಾ ಯಾತ್ರಿಕರನ್ನು ಪೊಲೀಸ್ ಇಲಾಖೆ ವಿಚಾರಣೆ ಒಳಪಡಿಸಿದೆ.
ಶುಕ್ರವಾರದ ಪ್ರಾರ್ಥನೆಗಳು ಎಂದಿನಂತೆ ನಡೆಯಲಿದ್ದು, ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಪೊಲೀಸರು ಇದುವರೆಗೆ ಯಾರನ್ನು ಸಂಶಯದ ಆಧಾರದ ಮೇಲೆ ಬಂಧಿಸಿಲ್ಲ. ಸ್ಪೋಟಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತು ಗುಪ್ತಚರ ಇಲಾಖೆ ಸಂಶಯಿತ ಜನರನ್ನು ವಿಚಾರಣೆಗೆ ಒಳಪಡಿಸಿದೆ. ಇದಲ್ಲದೆ ವಿದಿವಿಜ್ಞಾನ ಮತ್ತು ಸಿಐಡಿ ಅಫರಾಧ ವಿಭಾಗ ಕೂಡ ತನಿಖೆಯನ್ನು ಚುರುಕುಗೊಳಿಸಿವೆ.
ಸ್ಪೋಟ ಸಂಭವಿಸಿದ ಸ್ಥಳವನ್ನು ಸಾರ್ವಜನಿಕರಿಗೆ ನಿಷೇಧಿಸಲಾಗಿದ್ದರೂ, ಜುಮ್ಮಾ ನಮಾಜ್ ದರ್ಗಾದಲ್ಲಿ ನಡೆಸಲು ಅವಕಾಶ ಮಾಡಿಕೊಡಲಾಗಿದೆ. ಮತ್ತೆ ದುರ್ಘಟನೆ ಸಂಭವಿಸದಂತೆ ಪೊಲೀಸರು ಕ್ರಮ ತೆಗೆದುಕೊಂಡಿದ್ದು ಈ ನಿಟ್ಟಿನಲ್ಲಿ ಸಶಸ್ತ್ರ ಪೊಲೀಸ ಪಡೆಯನ್ನು ದರ್ಗಾದ ಸುತ್ತ ನಿಯೋಜಿಸಲಾಗಿದೆ.
ದರ್ಗಾದಲ್ಲಿ ಏಳು ಕ್ಲೋಸ್ಡ್ ಸರ್ಕಿಟ್ ಟಿವಿಗಳನ್ನು ಅಳವಡಿಸಲಾಗಿತ್ತು. ಖದಿಮ್ಸ್ ಮತ್ತು ದರ್ಗಾ ದಿವಾನ್ ಅವರುಗಳ ನಡುವಿನ ಭಿನ್ನಾಭಿಪ್ರಾಯದ ಕಾರಣ ಕಾರ್ಯನಿರ್ವಹಿಸುತ್ತಿಲ್ಲ ಎಂದು ತನಿಖಾದಿಕಾರಿ ಹೇಳಿದ್ದಾರೆ.
|