ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಭಾರತೀಯ ವಿಜ್ಞಾನಿ ನೇತೃತ್ವದ ಸಂಸ್ಥೆಗೆ ಶಾಂತಿ ನೊಬೆಲ್
ಜಾಗತಿಕ ಅತ್ಯುನ್ನತ ಪ್ರಶಸ್ತಿಯಾದ ನೊಬೆಲ್ ಪ್ರಶಸ್ತಿಯಲ್ಲಿಯೇ ಶ್ರೇಷ್ಠ ಎನ್ನಲಾಗುವ "ನೊಬೆಲ್ ಶಾಂತಿ ಪ್ರಶಸ್ತಿ"ಪುರಸ್ಕಾರವನ್ನು ಅಮೆರಿಕದ ಮಾಜಿ ಉಪಾಧ್ಯಕ್ಷ ಅಲ್ ಗೋರ್ ಅವರೊಂದಿಗೆ, ಭಾರತೀಯ ವಿಜ್ಞಾನಿ ಮುಂದಾಳತ್ವದ ಅಂತಾರಾಷ್ಟ್ರೀಯ ಸಂಸ್ಥೆ ಪಡೆದುಕೊಂಡಿದ್ದು, ಭಾರತೀಯರಿಗೆ ಹೆಮ್ಮೆ ತಂದಿದೆ.

ವಿಶ್ವಸಂಸ್ಥೆಯ 'ಹವಮಾನ ಬದಲಾವಣೆ ಅಧ್ಯಯನ ಅಂತರ್‌ಸರ್ಕಾರ ಸಮಿತಿ ಅರ್ಥಾತ್ ಐಪಿಸಿಸಿ' ಸಂಸ್ಥೆಗೆ ಈ ನೊಬೆಲ್ ದೊರಕಿದ್ದು, ಈ ಸಂಸ್ಥೆಯ ಅಧ್ಯಕ್ಷರು ಭಾರತೀಯ ಮೂಲದ ವಿಜ್ಞಾನಿ ರಾಜೇಂದ್ರಿ ಪಚೌರಿ.

2001ರಲ್ಲಿ ಭಾರತ ಸರಕಾರದ ಅತ್ಯುನ್ನತ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿ ಪಡೆದಿರುವ ಇವರು ಮೂಲತ ನೈನಿತಾಲ್‌ನವರು.

ಓದಿದ್ದು ಲಖನೌದಲ್ಲಿ, 1972ರಲ್ಲಿ ಇಂಡಸ್ಟ್ರಿಯಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ ಗಳಿಸಿದ ಇವರು ಮುಂದೆ, ಪಿಎಚ್‌ಡಿ ಪಡೆದಿದ್ದು ನಾರ್ತ್ ಕರೋಲಿನಾ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ.

2002ರಲ್ಲಿ ವಿಶ್ವಸಂಸ್ಥೆಯ 'ಹವಮಾನ ಬದಲಾವಣೆ ಅಧ್ಯಯನ ಅಂತರ್‌ಸರ್ಕಾರ ಸಮಿತಿ'ಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಅತ್ಯುತ್ತಮ ಕಾರ್ಯ ಯೋಜನೆಗಳನ್ನು ಹಾಕಿಕೊಂಡು, ಜಾಗತಿಕ ಹವಮಾನ ಬದಲಾವಣೆ ಕುರಿತು ವ್ಯಾಪಕ ಪ್ರಚಾರ ನಡೆಸಿರುವ ಹೆಮ್ಮೆಯ ಭಾರತೀಯ.

ಅವರ ನೇತೃತ್ವದಲ್ಲಿರುವ ಈ ಸಂಸ್ಥೆಯಲ್ಲಿ 130 ದೇಶಗಳ ಮೂರು ಸಾವಿರ ವಿಜ್ಞಾನಿಗಳು ಸೇವೆ ಸಲ್ಲಿಸುತ್ತಿರುವುದು ಭಾರತೀಯರಿಗೆ ಹೆಮ್ಮೆ ತರುವ ಸಂಗತಿ.
ಮತ್ತಷ್ಟು
ಸ್ಫೋಟದಲ್ಲಿ ಬಿಲಾಲ್ ಕೈವಾಡ ಶಂಕೆ
ಜಯಾ ಅರ್ಜಿಯ ತುರ್ತು ಇತ್ಯರ್ಥಕ್ಕೆ ನಕಾರ
ಒಪ್ಪಂದ ವಿಫಲವಾದರೆ ಜೀವನದ ಅಂತ್ಯವಲ್ಲ: ಪ್ರಧಾನಿ
ನದಿಗೆ ಬಸ್ ಉರುಳಿ 41 ಜನರ ಸಾವು
ದರ್ಗಾ ಸ್ಫೋಟ: ಬಾಂಗ್ಲಾ ಪ್ರವಾಸಿಗರ ವಿಚಾರಣೆ
ಕರ್ನಾಟಕದಲ್ಲಿ ಚುನಾವಣೆಯೊಂದೆ ಪರಿಹಾರ: ಯೆಚೂರಿ