ಥೈಲ್ಯಾಂಡಿನಿಂದ ಬಂದಿದ್ದ ನಾಲ್ಕು ಕೋಟಿ ರೂ ಮೌಲ್ಯದ ಚಿನ್ನ ಮತ್ತು ವಜ್ರಾಭರಣಗಳನ್ನು ಒಳಗೊಂಡಿದ್ದ ಕಂಟೈನರ್ ಒಂದು ಬಿಗಿ ಭದ್ರತೆಯನ್ನು ಹೊಂದಿರುವ ಚತ್ರಪತಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಳುವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಥಾಯಿ ಏರವೇಸ್ ಮೂಲಕ ಬ್ಯಾಂಕಾಂಕ್‌ನಿಂದ ಎರಡು ಪ್ರತ್ಯೇಕ ಪೆಟ್ಟಿಗೆಗಳ ಮೇಲೆ ಅತ್ಯಮೂಲ್ಯ ಲೋಹ ಎಂದು ಬರೆಯಲಾಗಿದ್ದ ಅಂದಾಜು 3.5 ಕೆಜಿ ಭಾರವಿದ್ದ ಕಂಟೈನರ್ ಗುರುವಾರ ಛತ್ರಪತಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದವು.
ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ಇಲ್ಲಿ ಸರಕುಗಳನ್ನು ಇಳಿಸಿಕೊಳ್ಳುವ ಏರ್ ಇಂಡಿಯಾದ ಸರಕು ಸಾಗಾಣಿಕಾ ವಿಭಾಗದ ಸಿಬ್ಬಂದಿಯು ಒಂದು ಪಾಕಿಟ್‌ನಲ್ಲಿನ ಎರಡು ಬ್ರೆಸ್‌ಲೆಟ್, ನಾಲ್ಕು ಪದಕ, 37 ಉಂಗುರುಗಳು ಕಾಣೆಯಾಗಿದ್ದು ಎಂದು ಹೇಳಿದ್ದು, ಒಟ್ಟು ನಾಲ್ಕು ಕೋಟಿ ರೂ ಮೌಲ್ಯದ ಒಡವೆಗಳು ಕಾಣೆಯಾಗಿವೆ ಎಂದು ಹೇಳಿದ್ದಾರೆ.
ವಿಮಾನದಿಂದ ಕಂಟೈನರ್‌ಗಳನ್ನು ಇಳಿಸುವ ಸ್ಥಳದಲ್ಲಿ ಕಳ್ಳತನವನ್ನು ಪತ್ತೆ ಹಚ್ಚಲಾಗಿದೆ ಎಂದು ವಿಮಾನ ನಿಲ್ದಾಣ ವಿಭಾಗದ ಎಸಿಪಿ ಜನಾರ್ದನ್ ಗರ್ಜೆ ಮಾಹಿತಿ ನೀಡಿದ್ದಾರೆ. ಅತ್ಯಮೂಲ್ಯ ವಸ್ತುಗಳು ವಿಮಾನದಿಂದ ಬಂದ ಸಮಯದಲ್ಲಿ ಏರ್ ಇಂಡಿಯಾ ಸಿಬ್ಬಂದಿ ಕಸ್ಟಮ್ಸ್ ಅಧಿಕಾರಿಗಳನ್ನು ಟಾರ್ಮಾಕ್ ಬಳಿ ಕರೆಯಬೇಕು. ಅಲ್ಲಿ ಕಸ್ಟಮ್ಸ್ ಇಲಾಖೆಯವರು ಪರೀಶಿಲಿಸಿದ ನಂತರ ಬಿಗಿ ಭದ್ರತೆಯಲ್ಲಿ ಭದ್ರತಾ ಕೊಣೆಗೆ ಅವುಗಳನ್ನು ಸಾಗಿಸಲಾಗುತ್ತದೆ.
ಥೈಲ್ಯಾಂಡ್‌ನಿಂದ ಬಂದ ಚಿನ್ನದ ಒಡವೆಗಳ ಪೆಟ್ಟಿಗೆ ಬಿಗ ಮುದ್ರೆಯೊಂದಿಗೆ ಬಂದಿರುವಂತೆ ಕಾಣುತ್ತಿದ್ದು. ವಿಮಾನದಿಂದ ಇಳಿಸಿಕೊಂಡ ನಂತರ ನಿಗಧಿತ ಸ್ಥಳದಲ್ಲಿ ಇಡಬೇಕಾದ ಸ್ಥಳದಲ್ಲಿ ಇಟ್ಟಿರಲಿಲ್ಲ. ಅಲ್ಲದೇ ನಿಯಮಾನುಸಾರ ಕಸ್ಟಮ್ಸ್ ಅಧಿಕಾರಿಗಳನ್ನು ಕರೆಯಲಾಗಿಲಿಲ್ಲ.
ವಿಮಾನಗಳ ರನ್ ವೇ ಮೇಲೆ ಬಿದ್ದಿದ್ದ ಕಂಟೈನರ್ ಅನ್ನು ನಿಲ್ದಾಣ ಸಿಬ್ಬಂದಿಯೊರ್ವ ಗಮನಿಸಿ, ಓಡಾಟಕ್ಕೆ ತೊಂದರೆಯಾಗುತ್ತದೆ ಎಂದು ಗಮನಿಸಿ. ಕಂಟೈನರ್ ಮೇಲಿನ ಮುದ್ರೆಯ ಸುರಕ್ಷತೆಯನ್ನು ಗಮನಿಸದೆ ಸರಕು ಕೊಣೆಗೆ ಸಾಗಿಸಿದ್ದಾನೆ ಎಂದು ಎಸಿಪಿ ಪ್ರಕರಣದ ಮಾಹಿತಿಯನ್ನು ಸುದ್ದಿಗಾರರಿಗೆ ನೀಡಿದ್ದಾರೆ.
|