ಉಭಯ ದೇಶಗಳ ಮಧ್ಯೆ ಸೌಹಾರ್ದ ಸಂಬಂಧಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ನೈಜೆರಿಯಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳಿಗೆ ಐದು ದಿನಗಳ ಕಾಲ ಪ್ರವಾಸ ಹಮ್ಮಿಕೊಂಡಿದ್ದಾರೆ.
ಭಾರತ ಮತ್ತು ನೈಜೆರಿಯಾ ದೇಶಗಳ ಮಧ್ಯೆ ಅನೇಕ ಒಪ್ಪಂದಗಳಿಗೆ ಸಹಿ ಹಾಕಲಿದ್ದು, ಅಕ್ಟೋಬರ್ 17 ರಂದು ಭಾರತ ,ಬ್ರೆಜಿಲ್, ದ. ಆಫ್ರಿಕಾ ದೇಶಗಳ ಶೃಂಗ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಧಾನಿ ಕಚೇರಿಯ ಮೂಲಗಳು ತಿಳಿಸಿವೆ.
ಬ್ರೆಜಿಲ್ ಮತ್ತು ದ. ಆಫ್ರಿಕಾ ದೇಶಗಳು ಪರಮಾಣು ಸರಬರಾಜು ದೇಶಗಳ ಪಾಲಿಗೆ ಸೇರಿದ್ದು, ಭಾರತ ಮತ್ತು ಅಮೆರಿಕ ದೇಶಗಳ ನಡುವೆ ನಡೆಯುತ್ತಿರುವ ಅಣು ಒಪ್ಪಂದ ಕುರಿತಂತೆ ಆಸಕ್ತಿ ಹೊಂದಿವೆ ಎಂದು ತಿಳಿಸಿದೆ.
ನೈಜೇರಿಯಾ 1962 ರಲ್ಲಿ ಪಂಡಿತ ಜವಾಹರಲಾಲ್ ನೆಹರು ಅವರ ಭೇಟಿಯ ನಂತರ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಭೇಟಿ ನೀಡಿದ ಮೊದಲ ವ್ಯಕ್ತಿಯಾಗಿದ್ದು,ನೈಜೇರಿಯ ಸಂಸತ್ತಿನ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
2003ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ನೈಜೇರಿಯಾಗೆ ಭೇಟಿ ನೀಡಿರುವುದನ್ನು ಸ್ಮರಿಸಬಹುದು.
|