ನ್ಯಾಯಮೂರ್ತಿ ಆರ್ ಎಸ್ ಸರ್ಕಾರಿಯಾ ಅವರ ನಿಧನಕ್ಕೆ ಪ್ರಧಾನ ಮಂತ್ರಿ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದು, ಸರ್ಕಾರಿಯಾ ಅವರು ಭಾರತದ ಸಂವಿಧಾನ ಮತ್ತು "ನಮ್ಮ ಫೆಡರಲ್ ಗಣತಂತ್ರ" ವ್ಯವಸ್ಥೆಯನ್ನು ಬಲಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆಂದು ಕೊಂಡಾಡಿದ್ದಾರೆ.
91 ವರ್ಷದ ನ್ಯಾಯಮೂರ್ತಿ ಸರ್ಕಾರಿಯಾ ಅವರು ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವಿನ ಸಂಬಂಧದ ಕುರಿತು ಸ್ಪಷ್ಟವಾದ ವ್ಯಾಖ್ಯೆಗಳನ್ನು ಮಾಡಿದ್ದರು. ಬಹಳ ದಿನಗಳಿಂದ ಆನಾರೋಗ್ಯದಿಂದ ಬಳಲುತ್ತಿದ್ದ ಅವರು ಶುಕ್ರವಾರ ರಾತ್ರಿ ಚಂಡಿಗಢ್‌ನಲ್ಲಿ ಕೊನೆಯೂಸಿರೆಳೆದರು.
ಸುಪ್ರಿಮ್ ಕೋರ್ಟ್‌ನ ನ್ಯಾಯಾಧೀಶರಾಗಿದ್ದ ಇವರು, ಕೇಂದ್ರ-ರಾಜ್ಯ ಸರಕಾರ ಸಂಬಂಧಗಳ ಅಧ್ಯಯನ ಸಮಿತಿಯ ಮುಖ್ಯಸ್ಥರಾಗಿದ್ದರು.
ಈ ಸಮಿತಿಯನ್ನು 1983ರಲ್ಲಿ ರಚಿಸಲಾಗಿತ್ತು. 1988ರಲ್ಲಿ ಸಮಿತಿ ತನ್ನ ವರದಿಯನ್ನು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರೆಗೆ ಸಲ್ಲಿಸಿತ್ತು. ಆ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವಿನ ಸಂಬಂಧ ಸ್ಪಷ್ಟವಾದ ವ್ಯಾಖ್ಯೆ ನೀಡಲಾಗಿದೆ.
|