ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ವಜ್ರಾಭರಣ ಕಳ್ಳರ ಬಂಧನ
ಮುಂಬಯಿಯ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಚಿನ್ನ ಮತ್ತು ವಜ್ರಗಳನ್ನೊಳಗೊಂಡ 4.5 ಕೋಟಿ ವೆಚ್ಚದ ಸರಕುಗಳನ್ನು ಕಳವು ಮಾಡಿದ ಆರೋಪದಲ್ಲಿ ಮೂರು ಏರ್ ಇಂಡಿಯಾ ಸರಕು ಲೋಡರ್‌ಗಳನ್ನು ಬಂಧಿಸಲಾಗಿದೆ.

ಗುರುವಾರ ಥಾಯ್ ಏರ್‌ವೇಯ್ಸ್ ವಿಮಾನವು ಬ್ಯಾಂಕಾಕ್‌ನಿಂದ ಸರಕುಗಳೊಂದಿಗೆ ಮುಂಬಯಿಗೆ ಆಗಮಿಸಿದ್ದ ಸಂದರ್ಭದಲ್ಲಿ ಈ ಕಳವು ನಡೆದಿತ್ತು.

ಖಾಲಿ ಬಾಕ್ಸ್‌ಗಳನ್ನು ರಾಶಿ ಹಾಕುವ ಸ್ಥಳದಲ್ಲಿ ಕೆಲಸ ಮಾಡುವ ಮೂವರು ಲೋಡರ್‌ಗಳನ್ನು ಬಂಧಿಸಲಾಗಿದೆ ಎಂದು ವಿಮಾನ ನಿಲ್ದಾಣ ವಿಭಾಗದ ಸಹಾಯಕ ಕಮಿಶನರ್ ಪೊಲೀಸ್ ಜನಾರ್ಧನ್ ಗೋರೆ ತಿಳಿಸಿದ್ದಾರೆ.

ಚಿನ್ನಾಭರಣ ಮತ್ತು ವಜ್ರ ಸೇರಿದಂತೆ ಸುಮಾರು 4.5 ಕೋಟಿ ಮೌಲ್ಯದಷ್ಟು ಸರಕುಗಳನ್ನು ಕಳವು ಮಾಡಿದ್ದು, ಆಭರಣಗಳನ್ನು ಕಸದ ತಿಪ್ಪೆಯಲ್ಲಿ ಇಡಲಾಗಿತ್ತು.
ಮತ್ತಷ್ಟು
ಸರ್ಕಾರಿಯಾ ನಿಧನ: ಪ್ರಧಾನಿ ಶೃದ್ದಾಂಜಲಿ
ನೈಜೆರಿಯಾ,ದ ಆಫ್ರಿಕಾ ದೇಶಗಳಿಗೆ ಪ್ರಧಾನಿ ಪ್ರವಾಸ
ವಿಮಾನ ನಿಲ್ದಾಣದಲ್ಲಿ ನಾಲ್ಕು ಕೋಟಿ ವಜ್ರಾಭರಣ ಕಳುವು
ಅಣು ಒಪ್ಪಂದದ ಪುನರ್ ಮಾತುಕತೆಗೆ ಜಸ್ವಂತ್ ಸಿಂಗ್ ಆಗ್ರಹ
ಅಜ್ಮೇರ್ ದರ್ಗಾಕ್ಕೆ ಪಾಟೀಲ್ ಭೇಟಿ
ಭಾರತೀಯ ವಿಜ್ಞಾನಿ ನೇತೃತ್ವದ ಸಂಸ್ಥೆಗೆ ಶಾಂತಿ ನೊಬೆಲ್