ಖ್ವಾಜಾ ಮೊಯಿನುದ್ದಿನ್ ಚಿಸ್ತಿ ದರ್ಗಾದಲ್ಲಿ ಇರಿಸಲಾಗಿದ್ದ ಬಾಂಬ್‌ಗಳನ್ನು ಕಟ್ಟಲು ಮದ್ಯಪ್ರದೇಶದಲ್ಲಿನ ಪತ್ರಿಕೆಗಳನ್ನು ಬಳಸಲಾಗಿತ್ತು ಎಂದು ಪತ್ತೆಯಾಗಿದ್ದು, ಈ ನಿಟ್ಟಿನಲ್ಲಿ ತನಿಖೆಯನ್ನು ಕೈಗೆತ್ತಿಕೊಂಡಿರುವ ರಾಜಸ್ತಾನಿ ಪೊಲೀಸರು ಉಜ್ಜೈನ್ ನಗರಕ್ಕೆ ಆಗಮಿಸಿದ್ದಾರೆ.
ಅಲ್ಲದೇ ಕೆಲ ಸ್ಫೋಟಕಗಳನ್ನು ಕಟ್ಟಲು ಉತ್ತರ ಪ್ರದೇಶ ಮತ್ತು ಗುಜರಾತ್ ರಾಜ್ಯಗಳಲ್ಲಿನ ದಿನ ಪತ್ರಿಕೆಗಳನ್ನು ಬಳಸಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಎ. ಆರ್. ಪವಾರ್ ಹೇಳಿದ್ದಾರೆ.
ಇಲ್ಲಿಯವರೆಗೆ ನಮಗೆ ಯಾವುದೇ ಲಿಖಿತ ಮಾಹಿತಿ ದೊರೆತಿಲ್ಲ. ಆದರೂ ನಾವು ತನಿಖೆಯಲ್ಲಿ ಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
ಮೂವರು ರಾಜಸ್ತಾನ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡಿರುವ ತನಿಖಾ ತಂಡವು ರತ್ನಾಮ್, ಉಜ್ಜೈನ್ ಜಿಲ್ಲೆಗಳಿಗೆ ತೆರಳಿದೆ. ಉಜ್ಜೈನಿಯ ಉನ್ಹೆಲ್ ನಗರದಲ್ಲಿ ನಿಷೇಧಿತ ಸಿಮಿ ಚಟುವಟಿಕೆಗಳು ವರದಿಯಾಗಿದ್ದ ಹಿನ್ನಲೆಯಲ್ಲಿ ಅಲ್ಲಿಯೂ ಕೂಡ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
|