ಲೂಧಿಯಾನದ ಮಲ್ಟಿಪ್ಲೆಕ್ಸ್‌ನಲ್ಲಿ ಸ್ಫೋಟದಿಂದ 6 ಜನರ ಹತ್ಯೆಯಾದ ಒಂದು ದಿನದ ಬಳಿಕ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ರಾಜ್ಯದಲ್ಲಿ ಭಯೋತ್ಪಾದನೆ ಮರುಕಳಿಸಿರುವುದನ್ನು ತಳ್ಳಿಹಾಕಿದ್ದು, ಕಷ್ಟದಿಂದ ಸಂಪಾದಿಸಿದ ಶಾಂತಿಯನ್ನು ಜನತೆ ಬಿಟ್ಟುಕೊಡುವುದಿಲ್ಲ ಎಂದು ಹೇಳಿದರು.
ಜನರು ದುರ್ದಿನಗಳನ್ನು ಅನುಭವಿಸಿದ್ದರಿಂದ ಭಯೋತ್ಪಾದಕರ ಬಗ್ಗೆ ಪಂಜಾಬ್ ಜನತೆಗೆ ಸಹಾನುಭೂತಿ ಇಲ್ಲ. ಹೀಗಾಗಿ ಭಯೋತ್ಪಾದನೆ ಮರುಕಳಿಸುವ ಅವಕಾಶವಿಲ್ಲ ಎಂದು ಅವರು ನುಡಿದರು. ಸ್ಫೋಟದಲ್ಲಿ ಸತ್ತವರ ಬಂಧುಗಳಿಗೆ ತಲಾ 2 ಲಕ್ಷ ರೂ. ಪರಿಹಾರವನ್ನು ಬಾದಲ್ ಘೋಷಿಸಿದ್ದಾರೆ.
ಸ್ಫೋಟದ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ವರದಿಗಾರರ ಜತೆ ಮಾತನಾಡಿದ ಅವರು, ಪಂಜಾಬ್ ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದು, ತನಿಖೆ ತಾರ್ಕಿಕ ಅಂತ್ಯಕ್ಕೆ ಮುಟ್ಟಿದ ಬಳಿಕ, ರಾಜ್ಯಪೊಲೀಸರು ವಿವರಗಳನ್ನು ನೀಡಲು ಶಕ್ತರಾಗುತ್ತಾರೆ ಎಂದು ವರದಿಗಾರರ ಜತೆ ಮಾತನಾಡುತ್ತಾ ಅವರು ಹೇಳಿದರು.
ಸ್ಫೋಟಕದ ಸ್ವರೂಪ ಅಥವಾ ಸ್ಫೋಟದ ಹಿಂದೆ ಕೈವಾಡದ ನಡೆಸಿದ ಗುಂಪಿನ ಬಗ್ಗೆ ಏನನ್ನಾದರೂ ಹೇಳುವುದು ಅಪಕ್ವವೆನಿಸುತ್ತದೆ ಎಂದು ಅವರು ನುಡಿದರು.
|