ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಮಾಯಾವತಿ ವಿಶ್ವದ 8 ಅಗ್ರಗಣ್ಯರಲ್ಲೊಬ್ಬರು
ಉತ್ತರಪ್ರದೇಶದ ಬೆಂಕಿಚೆಂಡು ನಾಯಕಿ ಮುಖ್ಯಮಂತ್ರಿ ಮಾಯಾವತಿ ಅವರು ಎಲ್ಲ ಅಡೆತಡೆಗಳ ನಡುವೆಯೂ ಉನ್ನತ ಸ್ಥಾನಕ್ಕೇರಿದ ವಿಶ್ವದಾದ್ಯಂತದ 8 ನಾಯಕರಲ್ಲಿ ಒಬ್ಬರೆಂದು ಅಮೆರಿಕದ ನಿಯತಕಾಲಿಕ ನ್ಯೂಸ್‌ವೀಕ್ ಅವರನ್ನು ಹೆಸರಿಸಿದೆ.

ನ್ಯೂಸ್‌ವೀಕ್ ಪತ್ರಿಕೆಗೆ ದಮನಿತ ವರ್ಗದ ಪರ ತಮ್ಮ ಹೋರಾಟವನ್ನು ಕುರಿತು ಬರೆದಿರುವ ಅವರು,ಉಳಿದ ರಾಜ್ಯಗಳಲ್ಲಿಯೂ ಇದೇ ರೀತಿಯ ಜಯ ಮರುಕಳಿಸುವಂತೆ ಮಾಡಿ ಗೆಹಲಿಯ ಅಧಿಕಾರ ಗದ್ದುಗೆಗೆ ಏರಲು ದೊಡ್ಡ ಹೋರಾಟಕ್ಕೆ ಸಿದ್ಧರಾಗುವುದು ತಮ್ಮ ಮಹತ್ತರ ಗುರಿಯಾಗಿದೆಯೆಂದು ತಿಳಿಸಿದ್ದಾರೆ.

ಬಡದಲಿತರ ಮುನ್ನಡೆಗೆ ಆರಂಭದಲ್ಲಿ ತಮ್ಮ ಪಕ್ಷವು ಆಕ್ರಮಣಕಾರಿ ಮನೋಭಾವ ಅನುಸರಿಸಬೇಕಾಯಿತು. ಮೇಲ್ವರ್ಗದ ಜನರ ಪ್ರಾಬಲ್ಯವಿರುವ ರಾಜಕೀಯ ಪಕ್ಷಗಳು ಬೆಳೆಯುತ್ತಿರುವ ಜನಸಮೂಹದ ಪ್ರಾಬಲ್ಯ ನೋಡಿ ಎಚ್ಚೆತ್ತುಕೊಂಡರು.

ಅವರ ಪ್ರತಿರೋಧದಿಂದ ನಾಲ್ಕು ಬಾರಿ ತಮ್ಮ ಮುಖ್ಯಮಂತ್ರಿ ಅಧಿಕಾರಾವಧಿ ಮೊಟಕುಗೊಂಡಿತು. ನಾವು ಜಾತಿ, ಧರ್ಮಗಳ ಭೇದವಿಲ್ಲದೇ ಬಡವರನ್ನೂ ಸೇರಿಸಿಕೊಂಡು ನೆಲೆಯನ್ನು ವಿಸ್ತರಿಸಲು ನಿರ್ಧರಿಸಿದೆವು ಎಂದು ಅವರು ಹೇಳಿದರು. ತಾವು ಗ್ರಾಮಮಟ್ಟದ ಸೌಹಾರ್ದ ಸಭೆಗಳನ್ನು ಬಡವರಿಗಾಗಿ ಜಾತಿ, ಭೇದವಿಲ್ಲದೇ ನಡೆಸಿದೆವು.

ನಮ್ಮ ಪ್ರಯತ್ನಗಳಿಗೆ ದಾಳಿಗಳು, ಕಾನೂನು ಮೊಕದ್ದಮೆಗಳಿಂದ ಪ್ರತಿರೋಧ ವ್ಯಕ್ತಪಡಿಸಲಾಯಿತು. ಆದರೆ ನಮ್ಮ ಹೋರಾಟ ನಿಲ್ಲಲಿಲ್ಲ. ಕೊನೆಗೂ 17 ವರ್ಷಗಳ ಬಳಿಕ ದಲಿತರ ಮುಂದಾಳತ್ವದ ಬಹುಮತ ಸರ್ಕಾರವನ್ನು ಉತ್ತರಪ್ರದೇಶದಲ್ಲಿ ತರಲಾಯಿತು ಎಂದು ಅವರು ಹೇಳಿದರು.

ಯಾವತಿ ಜತೆಗೆ ತಮ್ಮ ಯಶಸ್ಸಿನ ಕತೆಗಳನ್ನು ಬರೆದವರಲ್ಲಿ ಫ್ರಾನ್ಸ್ ಇಂಧನ ಕೂಟದ ಅರೇವಾ ಅನ್ನೆ ಲಾವೆರ್‌ಗಾನ್ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಪ್ರಧಾನ ನಿರ್ದೇಶಕಿ ಮಾರ್ಗರೇಟ್ ಚಾನ್ ಸೇರಿದ್ದಾರೆ.
ಮತ್ತಷ್ಟು
ಬಿಕ್ಕಳಿಸಿದ ಪ್ರಮೋದ್ ಪುತ್ರಿ
ಲುಧಿಯಾನಾ ಸ್ಪೋಟ: ಖಲಿಸ್ತಾನ್-ಜೆಹಾದಿ ಸಂಬಂಧ
ಭಯೋತ್ಪಾದನೆ ಮರುಕಳಿಕೆ ಇಲ್ಲ: ಬಾದಲ್
ಅಜ್ಮೇರ್ ಸ್ಫೋಟಕ್ಕೆ ಮ.ಪ್ರ ನಂಟು
ಚಿತ್ರಮಂದಿರದಲ್ಲಿ ಬಾಂಬ್ ಸ್ಫೋಟ:6 ಸಾವು
ವಜ್ರಾಭರಣ ಕಳ್ಳರ ಬಂಧನ