ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಮೋದಿ ಅಪ್ತರ ವರ್ಗಾವಣೆಗೆ ಚು. ಆಯೋಗ ಆದೇಶ
ಚುನಾವಣೆಯ ಹಿನ್ನೆಲೆಯಲ್ಲಿ ಗುಜರಾತ್ ಮುಖ್ಯಮಂತ್ರಿಗೆ ಆಪ್ತರಾಗಿರುವ ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ನಿರ್ಧರಿಸಿರುವ ಚುನಾವಣಾ ಆಯೋಗ, ಗುಜರಾತ್‌ನ ಪೊಲೀಸ್ ಮಹಾನಿರ್ದೇಶಕ ಪಿ ಸಿ ಪಾಂಡೆ ಸೇರಿದಂತೆ ಇತರೆ ಏಳು ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.

ವರ್ಗಾವಣೆ ಮಾಡಲ್ಪಟ್ಟ ಅಧಿಕಾರಿಗಳು ಯಾವುದೇ ಕಾರಣಕ್ಕೆ ಚುನಾವಣೆಗೆ ಸಂಬಂಧಪಟ್ಟ ಕರ್ತವ್ಯಕ್ಕೆ ನಿಯೋಜಿತರಾಬಾರದು ಎಂದು ಚುನಾವಣಾ ಆಯೋಗ ಸ್ಪಷ್ಟವಾಗಿ ನಿರ್ದೇಶನ ನೀಡಿದೆ. ಗುಜರಾತ್‌ನಲ್ಲಿ 2002ರಲ್ಲಿ ನಡೆದ ಗೋದ್ರಾ ಹತ್ಯಾಕಾಂಡ ಸಂದರ್ಭದಲ್ಲಿ ಪಿ ಸಿ ಪಾಂಡೆ ಅವರು ಅಹಮದಾಬಾದ್ ಪೋಲಿಸ್ ಆಯುಕ್ತರಾಗಿದ್ದರು. ಈ ಸಂದರ್ಭದಲ್ಲಿ ಕೋಮು ಹಿಂಸಾಚಾರ ಸಂಭವಿಸಿತ್ತು.

1970 ಸಾಲಿನ ಐಎಎಸ್ ಅಧಿಕಾರಿಯಾಗಿರುವ ಪಾಂಡೆಯವರನ್ನು ಕೆಲವು ತಿಂಗಳುವರೆಗೆ ಎರವಲು ಸೇವೆಯಾಧಾರ ಮೇಲೆ ಕೇಂದ್ರಕ್ಕೆ ವರ್ಗಾಯಿಸಲಾಗಿತ್ತು. ಅವರು ಈ ಸಂದರ್ಭದಲ್ಲಿ ಸಿಬಿಐನೊಂದಿಗೆ ಕೆಲಸ ಮಾಡುತ್ತಿದ್ದರು. ಆದರೆ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಎರಡು ವರ್ಷಗಳ ಹಿಂದೆ ಮತ್ತೆ ಅವರನ್ನು ಕೇಂದ್ರ ಸೇವೆಯಿಂದ ರಾಜ್ಯ ಸೇವೆಗೆ ವಾಪಸ್ಸು ಕರೆಸಿಕೊಂಡಿದ್ದರು.

ಪಾಂಡೆ ಸೇರಿದಂತೆ ಅಹಮ್ಮದಾಬಾದ್ ಪೋಲಿಸ್ ಆಯುಕ್ತ ಜೆ ಮಹಾಪ್ರತಾಪ್, ಉಪ ಪೋಲಿಸ್ ಮಹಾನಿರ್ದೇಶಕ(ಬಾರ್ಡರ್ ವಿಭಾಗ) ಐ ಎಂ ದೇಸಾಯಿ, ಪಟಾನ್ ಪೋಲಿಸ್ ವರಿಷ್ಠಾಧಿಕಾರಿ ಜೆ ಎನ್ ರಾಜ್ಗೊರ್, ರಾಜಕೋಟ್ ಎಸ್‌ಪಿ ಎನ್ ಡಿ ಸೊಳಂಕಿ ಮತ್ತು ತಾಪಿ ಎಸ್‌ ಪಿ ಎಸ್ ಕೆ ಗಾಢವಿ ಅವರನ್ನು ಕೂಡಾ ಚುನಾವಣಾ ಆಯೋಗ ವರ್ಗಾವಣೆ ಮಾಡಿದೆ. ವಲ್ಸಾದ್ ಜಿಲ್ಲಾಧಿಕಾರಿ ಡಿ ಎಚ್ ಬ್ರಹ್ಮಭಟ್ಟ ಮತ್ತು ಗಾಂಧಿನಗರ ಜಿಲ್ಲಾಧಿಕಾರಿ ಸೋನಲ್ ಮಿಶ್ರಾ ಅವರನ್ನು ಕೂಡಾ ವರ್ಗಾವಣೆ ಮಾಡಲಾಗಿದೆ.
ಮತ್ತಷ್ಟು
ಮಹಿಳೆಯರ ಮೇಲೆ ಮಾರಣಾಂತಿಕ ದಾಳಿ
ಮಾಯಾವತಿ ವಿಶ್ವದ 8 ಅಗ್ರಗಣ್ಯರಲ್ಲೊಬ್ಬರು
ಬಿಕ್ಕಳಿಸಿದ ಪ್ರಮೋದ್ ಪುತ್ರಿ
ಲುಧಿಯಾನಾ ಸ್ಪೋಟ: ಖಲಿಸ್ತಾನ್-ಜೆಹಾದಿ ಸಂಬಂಧ
ಭಯೋತ್ಪಾದನೆ ಮರುಕಳಿಕೆ ಇಲ್ಲ: ಬಾದಲ್
ಅಜ್ಮೇರ್ ಸ್ಫೋಟಕ್ಕೆ ಮ.ಪ್ರ ನಂಟು