ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಸೇತುಸಮುದ್ರಂ ಅನುಷ್ಠಾನಕ್ಕೆ ದೃಢಸಂಕಲ್ಪ
PTI
ಸೇತುಸಮುದ್ರಂ ನೌಕಾ ಕಾಲುವೆ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ದೃಢಸಂಕಲ್ಪ ಹೊಂದಿದ್ದರೂ ಯಾವುದೇ ವಿವಾದವನ್ನು ತಪ್ಪಿಸಲು ಬಯಸುತ್ತದೆ ಎಂದು ಕೇಂದ್ರ ವಿತ್ತಸಚಿವ ಪಿ. ಚಿದಂಬರಂ ತಿಳಿಸಿದರು.

ಯಾವುದೇ ವಿವಾದಕ್ಕೆ ಅವಕಾಶವಾಗದಂತೆ ಯೋಜನೆಯನ್ನು ಅನುಷ್ಠಾನಕ್ಕೆ ತರುವುದು ಯುಪಿಎ ಸರ್ಕಾರದ ಗುರಿ ಎಂದು ಇಲ್ಲಿಗೆ 60 ಕಿ.ಮೀ. ದೂರದ ಸಿಂಗಂಪುನರಿಯಲ್ಲಿ ಅವರು ವರದಿಗಾರರ ಜತೆ ಮಾತನಾಡುತ್ತಾ ಸೋಮವಾರ ಸಂಜೆ ತಿಳಿಸಿದರು.

ಭಾರತ-ಅಮೆರಿಕ ಪರಮಾಣು ಒಪ್ಪಂದಕ್ಕೆ ಎಡಪಕ್ಷಗಳ ವಿರೋಧದ ಬಗ್ಗೆ ಮಾತನಾಡುತ್ತಾ, ಅ.22ರಂದು ನಡೆಯುವ ಯುಪಿಎ-ಎಡ ಸಮಿತಿಯ ಸಭೆಯಲ್ಲಿ ಈ ವಿಷಯ ಇತ್ಯರ್ಥವಾಗುವುದೆಂದು ಹೇಳಿದರು.

ಬಂದ್ ವಿಷಯದ ಬಗ್ಗೆ ತಮಿಳುನಾಡು ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ಪ್ರತಿಕ್ರಿಯೆ ಬಗ್ಗೆ ಮಾತನಾಡುತ್ತಾ, ಅವು ಕೇವಲ ಮೌಖಿಕ ಅಭಿಪ್ರಾಯವಾಗಿದ್ದು, ಯಾವುದೇ ತೀರ್ಪಿನ ಭಾಗವಲ್ಲ ಎಂದು ಹೇಳಿದರು.

ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಬಗ್ಗೆ ಮಾತನಾಡಿದ ಅವರು, ಮೊದಲನೆ ಹಂತದಲ್ಲಿ ಶಿವಗಂಗಾ ಸೇರಿದಂತೆ ರಾಷ್ಟ್ರಾದ್ಯಂತ 200 ಜಿಲ್ಲೆಗಳು ಇದರ ವ್ಯಾಪ್ತಿಗೆ ಬರಲಿದ್ದು, ಮುಂದಿನ ಹಂತದಲ್ಲಿ 130 ಜಿಲ್ಲೆಗಳಿಗೆ ವಿಸ್ತರಿಸಲಾಗುವುದು ಎಂದು ಹೇಳಿದರು. ಒರಿಸ್ಸಾದಲ್ಲಿ ಈ ಯೋಜನೆ ಅನುಷ್ಠಾನದ ಬಗ್ಗೆ ಕೆಲವು ದೂರುಗಳಿದ್ದು, ಅವನ್ನು ಪರಿಶೀಲಿಸಲಾಗುವುದು ಎಂದು ಹೇಳಿದರು.
ಮತ್ತಷ್ಟು
ಮೋದಿ ಅಪ್ತರ ವರ್ಗಾವಣೆಗೆ ಚು. ಆಯೋಗ ಆದೇಶ
ಮಹಿಳೆಯರ ಮೇಲೆ ಮಾರಣಾಂತಿಕ ದಾಳಿ
ಮಾಯಾವತಿ ವಿಶ್ವದ 8 ಅಗ್ರಗಣ್ಯರಲ್ಲೊಬ್ಬರು
ಬಿಕ್ಕಳಿಸಿದ ಪ್ರಮೋದ್ ಪುತ್ರಿ
ಲುಧಿಯಾನಾ ಸ್ಪೋಟ: ಖಲಿಸ್ತಾನ್-ಜೆಹಾದಿ ಸಂಬಂಧ
ಭಯೋತ್ಪಾದನೆ ಮರುಕಳಿಕೆ ಇಲ್ಲ: ಬಾದಲ್