ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ರಾಜ್ಯ ಸಚಿವ ಅಸ್ರಫ್ ಫಾತ್ಮಿ ಅವರು ದರ್ಬಾಂಗಾದ ಉಪಮೇಯರ್ ಬದ್ರುಜಾಮ ಖಾನ್ ಹತ್ಯೆಗೆ ಪಿತೂರಿ ನಡೆಸಿದ್ದಾರೆಂದು ಆರೋಪ ಹೊರಿಸಲಾಗಿದೆ.
ದರ್ಬಾಂಗಾ ಕೌನ್ಸಿಲರ್ ಅಯನುಲ್ಲಾ ಖಾನ್ ಸೇರಿದಂತೆ ಐದು ಮಂದಿಯನ್ನು ಇದಕ್ಕೆ ಸಂಬಂಧಿಸಿದಂತೆ ಬಂಧಿಸಿದಾಗ ಅಯನುಲ್ಲಾ ಇಡೀ ಪಿತೂರಿಯ ಬಗ್ಗೆ ಪೊಲೀಸರಿಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ.
ಈ ಅಪರಾಧಕ್ಕೆ ರಾಜಕೀಯ ವೈಮನಸ್ಸು ಕಾರಣವೆಂದು ಶಂಕಿಸಲಾಗಿದೆ. ಫಾತ್ಮಿ ಮತ್ತು ಅಯನುಲ್ಲಾ ಆರ್‌ಜೆಡಿಗೆ ಸೇರಿದವರಾಗಿದ್ದು, ಬದ್ರುಜಾಮಾ ಖಾನ್ ಜೆಡಿಯುಗೆ ಸೇರಿದವರು.
ತಮ್ಮ ಕೊಲೆ ಯತ್ನಕ್ಕೆ ಕಾರಣ ನೀಡಿದ ಬದ್ರುಜಾಮಾ ಖಾನ್ ದರ್ಬಾಂಗಾ ಪುರಸಭೆಯನ್ನು ಬಿಜೆಪಿ-ಜೆಡಿಯು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡಿದ್ದರಿಂದ ತಮ್ಮ ಹತ್ಯೆಗೆ ಪಿತೂರಿ ನಡೆಸಲಾಯಿತೆಂದು ಅವರು ಹೇಳಿದ್ದಾರೆ.
|