ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಭೂಸುಧಾರಣೆ ಬೇಡಿಕೆ ಪರಿಶೀಲನೆ:ಸೋನಿಯಾ
PTI
ಗ್ರಾಮೀಣ ಪ್ರದೇಶಗಳ ಜನರು, ದಲಿತರು ಮತ್ತು ಬುಡಕಟ್ಟು ಜನರ ಹಿತರಕ್ಷಣೆ ಮಾಡಲು ಭೂನೀತಿ ಮತ್ತು ರಾಷ್ಟ್ರೀಯ ಭೂ ಆಯೋಗದ ಸ್ಥಾಪನೆಗೆ ಯುಪಿಎ ಪರಿಶೀಲನೆ ನಡೆಸಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಾಮಾಜಿಕ ಕಾರ್ಯಕರ್ತರಿಗೆ ಭರವಸೆ ನೀಡಿದ್ದಾರೆ.

ಮ್ಯಾಗ್‌ಸೆಸೆ ಪ್ರಶಸ್ತಿ ವಿಜೇತ ಅರುಣ್ ರಾಯ್ ನೇತೃತ್ವದಲ್ಲಿ ಕಾರ್ಯಕರ್ತರ ಗುಂಪೊಂದು ಮಂಗಳವಾರ ಸೋನಿಯಾ ಅವರನ್ನು ಭೇಟಿ ಮಾಡಿ, ಭೂಸುಧಾರಣೆಗಳನ್ನು ಜಾರಿಗೆ ತರುವ ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ ಮಾಡಿದ ಭರವಸೆಯನ್ನು ಯುಪಿಎ ಈಡೇರಿಸಬೇಕೆಂದು ಒತ್ತಾಯಿಸಿದಾಗ ಸೋನಿಯಾ ಮೇಲಿನ ಭರವಸೆ ನೀಡಿದರು.

ತಮ್ಮ ಜೀವನೋಪಾಯಕ್ಕಾಗಿ ಭೂಮಿಯನ್ನು ಅವಲಂಬಿಸಿರುವ ಜನರ ಹಕ್ಕುಗಳ ಸಂರಕ್ಷಣೆಗೆ ರಾಷ್ಟ್ರೀಯ ಭೂನೀತಿ ಮತ್ತು ರಾಷ್ಟ್ರೀಯ ಭೂ ಆಯೋಗವನ್ನು ಸರ್ಕಾರ ರೂಪಿಸಬೇಕೆಂದು ನಾವು ಬಯಸುವುದಾಗಿ ರಾಯ್ ಹೇಳಿದರು.

ಉಳುವವನಿಗೆ ಭೂಮಿ ನಮ್ಮ ನೀತಿಯಾಗಿದ್ದು, ಯಾವುದೇ ಹೊಸ ಕಾನೂನು ಅಥವಾ ನೀತಿಯನ್ನು ಹೇರುವುದಿಲ್ಲ ಎಂದು ಸೋನಿಯಾ ಅವರಿಗೆ ಆಶ್ವಾಸನೆ ನೀಡಿದರು.

ಈ ನಡುವೆ, ಸುಮಾರು 25 ಸಾವಿರ ಬುಡಕಟ್ಟು ಜನರು ತಮ್ಮ ಭೂಮಿಯ ಹಕ್ಕು ರಕ್ಷಣೆ ಸಲುವಾಗಿ ಗ್ವಾಲಿಯರ್‌ನಿಂದ ರಾಜಧಾನಿಗೆ ಯಾತ್ರೆ ಹೊರಟಿದ್ದಾರೆ. ಯಾತ್ರೆಯು ಅ.29ರಂದು ದೆಹಲಿಯನ್ನು ಮುಟ್ಟಲಿದೆ.
ಮತ್ತಷ್ಟು
ಉಪಮೇಯರ್ ಹತ್ಯೆಗೆ ಫಾತ್ಮಿ ಪಿತೂರಿ ಆರೋಪ
ಸೇತುಸಮುದ್ರಂ ಅನುಷ್ಠಾನಕ್ಕೆ ದೃಢಸಂಕಲ್ಪ
ಮೋದಿ ಅಪ್ತರ ವರ್ಗಾವಣೆಗೆ ಚು. ಆಯೋಗ ಆದೇಶ
ಮಹಿಳೆಯರ ಮೇಲೆ ಮಾರಣಾಂತಿಕ ದಾಳಿ
ಮಾಯಾವತಿ ವಿಶ್ವದ 8 ಅಗ್ರಗಣ್ಯರಲ್ಲೊಬ್ಬರು
ಬಿಕ್ಕಳಿಸಿದ ಪ್ರಮೋದ್ ಪುತ್ರಿ