ಹತ್ತು ವರ್ಷಗಳ ಕೆಳಗೆ ಕೋಲಾಹಲ ಮೂಡಿಸಿದ ಇಬ್ಬರು ಅಮಾಯಕ ಉದ್ಯಮಿಗಳ ಹತ್ಯೆಗೆ ಸಂಬಂಧಿಸಿದ ಕನ್ನಾಟ್‌ಪ್ಲೇಸ್ ಶೂಟ್‌ಔಟ್ ಪ್ರಕರಣದಲ್ಲಿ 10 ಪೊಲೀಸರನ್ನು ದೆಹಲಿ ಕೋರ್ಟೊಂದು ತಪ್ಪಿತಸ್ಥರನ್ನಾಗಿಸಿದೆ.
ಈ ಪ್ರಕರಣದ ತನಿಖೆ ನಡೆಸಿದ ಸಿಬಿಐ ಯಾವುದೇ ಪ್ರಚೋದನೆ ಇಲ್ಲದೇ 10 ಪೊಲೀಸರು ಮನಬಂದಂತೆ ಗುಂಡುಹಾರಿಸಿ ಉದ್ಯಮಿಗಳನ್ನು ಹತ್ಯೆ ಮಾಡಿದ್ದಾರೆಂದು ಆಪಾದಿಸಿತ್ತು. ಗೂಂಡಾಗಳನ್ನು ಹತ್ಯೆ ಮಾಡಿದ್ದೇವೆಂದು ಹೇಳಿಕೊಂಡು ಬಡ್ತಿ ಗಿಟ್ಟಿಸುವುದು ಪೊಲೀಸರ ದುಷ್ಕೃತ್ಯಕ್ಕೆ ಕಾರಣವಾಗಿತ್ತು ಎಂದು ಸಿಬಿಐ ಆರೋಪಿಸಿದೆ.
ಆರೋಪಿಗಳ ವಿರುದ್ಧ ಎಲ್ಲ ಆರೋಪಗಳು ರುಜುವಾತಾಗಿವೆ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿನೋದ್ ಕುಮಾರ್ ತಿಳಿಸಿದರು. ಅಮಾನತಾದ ಎಸಿಪಿ ಎಸ್.ಎಸ್. ರಥಿ ಮತ್ತು ಇನ್ನೂ 9 ಮಂದಿ ಐಪಿಸಿಯ ಸೆಕ್ಷನ್ 302(ಹತ್ಯೆ), 307(ಹತ್ಯೆ ಯತ್ನ), 201(ಪುರಾವೆ ನಾಶ) ಮತ್ತು 193(ಸುಳ್ಳು ಸಾಕ್ಷ್ಯ) ನೀಡಿದ್ದಕ್ಕಾಗಿ ತಪ್ಪಿತಸ್ಥರೆಂದು ಕೋರ್ಟ್ ಹೇಳಿದೆ. ಅ.24ರಂದು ರಥಿ, ಇನ್ಸ್‌ಪೆಕ್ಟರ್ ಅನಿಲ್ ಕುಮಾರ್ ಮತ್ತು ಇನ್ನೂ 8 ಮಂದಿಯ ವಿರುದ್ಧ ಅ.24ರಂದು ಶಿಕ್ಷೆಯ ಸ್ವರೂಪ ಪ್ರಕಟಿಸಲಿದೆ.
ಈ ಪ್ರಕರಣದಲ್ಲಿ ತಪ್ಪಿತಸ್ಥರಾದ ಇನ್ನಿತರ ಪೊಲೀಸರು ಸಬ್ ಇನ್ಸ್‌ಪೆಕ್ಟರ್ ಅಶೋಕ್ ರಾಣಾ, ಮುಖ್ಯ ಪೇದೆಗಳಾದ ಶಿವಕುಮಾರ್, ತೇಜ್‌ಪಾಲ್ ಸಿಂಗ್, ಮಹಾವೀರ್ ಸಿಂಗ್, ಪೇದೆಗಳಾದ ಸುಮೇರ್ ಸಿಂಗ್, ಸುಭಾಷ್ ಚಂದ್, ಸುನಿಲ್ ಕುಮಾರ್ ಮತ್ತು ಕೊಥಾರಿ ರಾಮ್. ಇದೊಂದು ಕಣ್ತಪ್ಪಿನಿಂದ ನಡೆದ ಘಟನೆ ಎಂದು ಹೇಳಿದ್ದ ಪೊಲೀಸರು ತಾವು ಕ್ರಿಮಿನಲ್ ಗ್ಯಾಂಗನ್ನು ಅನುಸರಿಸಿಕೊಂಡು ಹೋಗಿದ್ದೆಂದು ಭಾವಿಸಿದ್ದಾಗಿ ನುಡಿದರು.
ಆದರೆ ಘಟನೆ ಸ್ಥಳದಲ್ಲಿದ್ದ ಹಿರಿಯ ಪತ್ರಕರ್ತ ಕುಮಾರ್ ರಾಜೇಶ್ ವಿವರಣೆ ಮತ್ತು ಮೃತರ ಬಂಧುಗಳ ಹೇಳಿಕೆ ಬೇರೆ ತೆರನಾಗಿತ್ತು.
|