ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ತಪ್ಪಿತಸ್ಥರಿಗೆ ಮರಣದಂಡನೆಗೆ ಆಗ್ರಹ
10 ವರ್ಷಗಳ ಕೆಳಗೆ ಕನ್ನಾಟ್‌ಪ್ಲೇಸ್ ಶೂಟ್‌ಔಟ್ ಪ್ರಕರಣದಲ್ಲಿ ಇಬ್ಬರು ಉದ್ಯಮಿಗಳ ಹತ್ಯೆಯಲ್ಲಿ ತಪ್ಪಿತಸ್ಥರಾದ ಪೊಲೀಸರಿಗೆ ಮರಣದಂಡನೆ ವಿಧಿಸಬೇಕೆಂದು ಉದ್ಯಮಿಗಳ ಕುಟುಂಬಿಕರು ಆಗ್ರಹಿಸಿದ್ದಾರೆ.

ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸುವ ಮೂಲಕ ಶಿಕ್ಷೆ ಅನುಕರಣೀಯವಾಗಬೇಕು ಎಂದು ಉದ್ಯಮಿ ಪ್ರದೀಪ್ ಗೋಯಲ್ ಪತ್ನಿ ನೀಮಾ ಗೋಯಲ್ ಹೇಳಿದರು.

ಹತ್ಯೆಗೊಳಗಾದ ಇನ್ನೊಬ್ಬರು ಉದ್ಯಮಿ ಜಗಜೀತ್ ಸಿಂಗ್ ಪುತ್ರ ನಿರಂಜನ್ ಸಿಂಗ್ "ನನ್ನ ಜೀವನ ಹಾಳಾಗಿದ್ದು, ದೇವರು ಅವರನ್ನು ಖಂಡಿತವಾಗಿ ಶಿಕ್ಷಿಸುತ್ತಾನೆಂದು" ಹೇಳಿದರು.ಇದೊಂದು ಉದ್ದೇಶಪೂರ್ವಕ ಹತ್ಯೆಯಾಗಿದ್ದು, ತಪ್ಪಿತಸ್ಥರಿಗೆ ಮರಣದಂಡನೆ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.

ಯಾರೇ ಪೊಲೀಸರು ತಮ್ಮನ್ನು ಸಂಪರ್ಕಿಸಿ ಘಟನೆಯ ಬಗ್ಗೆ ಪಶ್ಚಾತ್ತಾಪ ಪಟ್ಟಿದ್ದಾರೆಯೇ ಎಂದು ಗೋಯಲ್ ತಂದೆಯನ್ನು ಪ್ರಶ್ನಿಸಿದಾಗ ಯಾವುದೇ ಪೊಲೀಸರು ನಮ್ಮ ಬಳಿ ಬಂದು ತಪ್ಪು ಒಪ್ಪಿಕೊಂಡಿಲ್ಲ. ಬದಲಿಗೆ ನಮ್ಮನ್ನು ಭಯೋತ್ಪಾದಕರೆಂದು ಕರೆದರೆಂದು ಅವರು ಟೀಕಿಸಿದ್ದಾರೆ.

ಸೇತುಜನೇರಿಯನ್ ಸಿಂಗ್ ತಮ್ಮ ಕಣ್ಣೀರನ್ನು ಹತ್ತಿಕ್ಕಲಾರದೇ, ನಮಗೆ ಕೊನೆಗೂ ಶಾಂತಿ ಸಿಕ್ಕಿತು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದೊಂದು ನಕಲಿ ಎನ್‌ಕೌಂಟರ್ ಪ್ರಕರಣ. ಶಾಂತಿಪ್ರಿಯ ಪೌರರಿಗೆ ಕಳಂಕ ತಂದು ಗೂಂಡಾಗಳೆಂದು ಪೊಲೀಸರು ಚಿತ್ರಿಸಿದ್ದಾರೆ. ಅವರಿಗೂ ನಮ್ಮ ಮಗನಿಗಾದ ಗತಿ ಉಂಟಾಗುತ್ತದೆ.

ಪ್ರತಿ ವಿಚಾರಣೆ ಸಂದರ್ಭದಲ್ಲೂ ನಾವು ಕುರುಕ್ಷೇತ್ರದಿಂದ ಇಲ್ಲಿಗೆ ಪ್ರಯಾಣ ಮಾಡಬೇಕಾಯಿತು ಎಂದು ಕಷ್ಟ ತೋಡಿಕೊಂಡಿದ್ದಾರೆ. 10 ಪೊಲೀಸರ ವಿರುದ್ಧ ಕೋರ್ಟ್ ಅ.24ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.
ಮತ್ತಷ್ಟು
ಉದ್ಯಮಿಗಳ ಹತ್ಯೆ:10 ಪೊಲೀಸರು ತಪ್ಪಿತಸ್ಥರು
ಹಕ್ಕು ಬಾಧ್ಯತಾ ಸಮಿತಿಯಿಂದ ರೋನೆನ್‌ಗೆ ಬುಲಾವ್
ಭೂಸುಧಾರಣೆ ಬೇಡಿಕೆ ಪರಿಶೀಲನೆ:ಸೋನಿಯಾ
ಉಪಮೇಯರ್ ಹತ್ಯೆಗೆ ಫಾತ್ಮಿ ಪಿತೂರಿ ಆರೋಪ
ಸೇತುಸಮುದ್ರಂ ಅನುಷ್ಠಾನಕ್ಕೆ ದೃಢಸಂಕಲ್ಪ
ಮೋದಿ ಅಪ್ತರ ವರ್ಗಾವಣೆಗೆ ಚು. ಆಯೋಗ ಆದೇಶ