ಭಾರತ ಅಮೆರಿಕ ಪರಮಾಣು ಒಪ್ಪಂದದ ಕುರಿತಾಗಿ ಇರುವ ತೊಡಕುಗಳ ಬಗ್ಗೆ ಅಮೆರಿಕ ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಅವರಿಗೆ ಪ್ರಧಾನಿ ಮನಮೋಹನ್ ಸಿಂಗ್ ಮನವರಿಕೆ ಮಾಡಿಕೊಟ್ಟಿರುವುದನ್ನು ಸಿಪಿಐ(ಎಂ) ಸ್ವಾಗತಿಸಿದ್ದು, ಸರಕಾರವನ್ನು ಉರುಳಿಸುವುದು ಎಡಪಕ್ಷದ ಉದ್ದೇಶವಾಗಿಲ್ಲ ಬದಲಾಗಿ ಈ ಒಪ್ಪಂದವನ್ನು ವಿರೋಧಿಸುವುದಾಗಿದೆ ಎಂದು ತಿಳಿಸಿದೆ.
ಅಣು ಒಪ್ಪಂದದಲ್ಲಿರುವ ತೊಡಕುಗಳ ಬಗ್ಗೆ ಪ್ರಧಾನಿಯ ಬುಷ್ ಅವರಿಗೆ ಮನವರಿಕೆ ಮಾಡಿದ್ದಾರೆಂಬುದಾಗಿ ಪ್ರಧಾನಮಂತ್ರಿ ಕಾರ್ಯಾಲಯಗಳು ತಿಳಿಸಿದೆ.
ಈ ಕ್ರಮವು ಸ್ವಾಗತಾರ್ಹವಾಗಿದೆ ಎಂದು ಸಿಪಿಐ(ಎಂ) ನಾಯಕ ಸೀತಾರಾಮ್ ಯಚೂರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ದೇಶಕ್ಕೆ ಮಾರಕವಾಗಿರುವ ಅಣು ಒಪ್ಪಂದವನ್ನು ವಿರೋಧಿಸುವುದು ಎಡ ಪಕ್ಷಗಳ ಅಜೆಂಡಾವಾಗಿದೆ ಹೊರತಾಗಿ ಎಡಪಕ್ಷಗಳನ್ನು ರಕ್ಷಿಸುವುದಾಗಲೀ ಉರುಳಿಸುವುದಾಗಲೀ ಅಲ್ಲ ಎಂದು ತಿಳಿಸಿದ್ದಾರೆ.
ಈ ಒಪ್ಪಂದವನ್ನು ನೆರವೇರಿಸುವ ವೆಚ್ಚವು ಸರಕಾರಕ್ಕೆ ಭರಿಸಲಾಗದಷ್ಟು ದುಬಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
|