ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಪೂರ್ಣ ಸಹಭಾಗಿತ್ವಕ್ಕೆ ಭಾರತ ಒತ್ತಾಯ
ಅಮೆರಿಕದ ಜೊತೆಗಿನ ನಾಗರಿಕ ಪರಮಾಣು ಒಪ್ಪಂದ ಅನಿಶ್ಚತೆಯಲ್ಲಿ ಇದ್ದರೂ ಭಾರತ, ತನ್ನನ್ನು ಅಣ್ವಸ್ತ್ರ ಹೊಂದಿರುವ ದೇಶಗಳೊಂದಿಗೆ ಮುಖ್ಯವಾಹಿನಿಯಲ್ಲಿ ಗುರುತಿಸಬೇಕು ಎಂದು ಒತ್ತಾಯ ಮಾಡಿದೆ. ಮುಖ್ಯವಾಹಿನಿಯಲ್ಲಿ ಭಾರತ ಸೇರುವುದರಿಂದ ಅಂತಾರಾಷ್ಟ್ರೀಯ ಅಣುಶಕ್ತಿ ಪ್ರಾಧಿಕಾರದ ಸುರಕ್ಷಾ ನಿಯಮಗಳನ್ನು ಅಳವಡಿಸಿಕೊಳ್ಳುವುದಕ್ಕೆ ಸಮಯ ನಿರ್ಭಂಧ ಇಲ್ಲದಂತಾಗುತ್ತದೆ.

ಪ್ರಧಾನಿ ಮನ್‌ಮೋಹನ್ ಅವರೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳುವ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ರಾಜ್ಯ ವಿದೇಶಾಂಗ ಖಾತೆ ಸಚಿವ ಆನಂದ್ ಶರ್ಮಾ ಅವರು ಜಾಗತಿಕ ಪರಮಾಣು ಶಕ್ತ ರಾಷ್ಟ್ರಗಳೊಂದಿಗೆ ಗುರುತಿಸಿಕೊಳ್ಳದೇ ಇರುವುದು ದೇಶದ ಹಿತಾಸಕ್ತಿಗೆ ಮಾರಕವಾಗಲಿದೆ ಎಂದು ಎಡಪಕ್ಷಗಳನ್ನು ಉದ್ದೇಶಿಸಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಧಾನಿ ಮನ್‌ಮೋಹನ್ ಸಿಂಗ್ ಅವರು ಅಣು ಒಪ್ಪಂದಕ್ಕೆ ಸಂಬಂಧಪಟ್ಟಂತೆ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಭಾರತ ಮತ್ತು ಅಮೆರಿಕ ನಡುವಿನ ನಾಗರಿಕ ಅಣು ಒಪ್ಪಂದವನ್ನು ಪ್ರಸ್ತಾಪಿಸದೇ ಭಾರತ ಮಾತ್ರ ಪರಮಾಣು ರಾಷ್ಟ್ರಗಳೊಂದಿಗೆ ಸಮಗ್ರತೆಯನ್ನು ಬಯಸುತ್ತಿದೆ ಎಂದು ಹೇಳಿದ್ದಾರೆ.

ಒಪ್ಪಂದವನ್ನು ಜಾರಿ ಮಾಡುವುದಕ್ಕೆ ಕೆಲವೊಂದು ಅಡ್ಡಿಗಳಿದ್ದು, ಅವುಗಳ ಪರಿಹಾರದ ನಂತರ ಒಪ್ಪಂದವನ್ನು ಜಾರಿಗೊಳಿಸಲು ಭಾರತ ಸಿದ್ದವಿದೆ ಎಂದು ಪ್ರಧಾನಿ ಮನ್‌ಮೋಹನ್ ಸಿಂಗ್ ಜಾರ್ಜ್ ಬುಷ್ ಅವರಿಗೆ ಈ ಮೊದಲು ಹೇಳಿದ್ದರು.

ಅಂತಾರಾಷ್ಟ್ರೀಯ ಅಣುಶಕ್ತಿ ಸುರಕ್ಷಾ ಪ್ರಾಧಿಕಾರ ನಿಯಮಗಳನ್ನು ಅಳವಡಿಸಿಕೊಳ್ಳುವ ಸಂಬಂಧ ಸಮಯ ಮಿತಿ ನಿಗಧಿ ಮಾಡಿಲ್ಲ ಆದ್ದರಿಂದ ಒಪ್ಪಂದದ ಕುರಿತು ಇರುವ ಅನಿಶ್ಚತತೆ ಪರಿಹಾರವಾದ ನಂತರ ಆ ಕುರಿತು ವಿಚಾರ ಮಾಡಲಾಗುವುದು ಎಂದು ಹೇಳಿದ್ದಾರೆ.

ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ಅವರು ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಪರಮಾಣು ಪೂರೈಕೆಯ ಸದಸ್ಯ ರಾಷ್ಟ್ರಗಳಾಗಿದ್ದು, ಅಣ್ವಸ್ತ್ರ ಪ್ರಸರಣ ವಿಚಾರದಲ್ಲಿ ಅವುಗಳು ತಮ್ಮದೇ ಆದ ನಿಲುವು ಹೊಂದಿದ್ದು, ಆದರೆ ಭಾರತವನ್ನು ಐಎಇಎಯಲ್ಲಿ ಬೆಂಬಲಿಸುವ ಸಾಧ್ಯತೆ ಇದೆ.

ಭಾರತಕ್ಕೆ ಯುರೇನಿಯಂ ಗೀಳು ಅಂಟಿಕೊಂಡಿದೆ ಎಂಬ ಆಪಾದನೆಯನ್ನು ನೇರವಾಗಿ ತಿರಸ್ಕರಿಸಿದ ಶರ್ಮಾ, ಪೂರ್ವಾಗ್ರಹ ಪೀಡಿತ ವ್ಯಕ್ತಿಗಳು ಮಾತ್ರ ಇಂತಹ ಹೇಳಿಕೆ ನೀಡಲು ಸಾಧ್ಯ. ವಾಸ್ತವಿಕವಾಗಿ ಭಾರತ ಶಕ್ತಿ ಸಂಪನ್ಮೂಲದ ಕೊರತೆಯನ್ನು ಗಮನಿಸಿದಲ್ಲಿ ಯುರೇನಿಯಂ ಅವಶ್ಯಕತೆಯನ್ನು ಮನಗಾಣಬಹುದು ಎಂದರು.

ಶಕ್ತಿ ಸಂಪನ್ಮೂಲದ ಕೊರತೆ ನಿಗಿಸಿಕೊಳ್ಳುವುದಕ್ಕೆ ಆಯಾ ದೇಶದ ರಾಜಕೀಯ ವಲಯ ಸಾದ್ಯವಿರುವ ಎಲ್ಲ ಆಯ್ಕೆಗಳ ಕುರಿತು ವಿಚಾರ ಮಾಡಬೇಕು. ಪರಿಸರಕ್ಕೆ ಹಾನಿಯುಂಟು ಮಾಡದ ಶಕ್ತಿ ಸಂಪನ್ಮೂಲ ಇಂದು ಅವಶ್ಯವಾಗಿದ್ದು, ಅಣುಶಕ್ತಿ ಪರಿಸರ ಸ್ನೇಹಿ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು
ದೇಶದ ಮೊದಲ ಮಹಿಳಾ ರಾಜಕೀಯ ಪಕ್ಷ ಪ್ರಾರಂಭ
ಮನಮೋಹನ್ ಮನವರಿಕೆಗೆ ಸಿಪಿಐ(ಎಂ) ಸ್ವಾಗತ
ತಪ್ಪಿತಸ್ಥರಿಗೆ ಮರಣದಂಡನೆಗೆ ಆಗ್ರಹ
ಉದ್ಯಮಿಗಳ ಹತ್ಯೆ:10 ಪೊಲೀಸರು ತಪ್ಪಿತಸ್ಥರು
ಹಕ್ಕು ಬಾಧ್ಯತಾ ಸಮಿತಿಯಿಂದ ರೋನೆನ್‌ಗೆ ಬುಲಾವ್
ಭೂಸುಧಾರಣೆ ಬೇಡಿಕೆ ಪರಿಶೀಲನೆ:ಸೋನಿಯಾ