ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಎಐಎಡಿಎಂಕೆ ಶಾಸಕರ ಸಾಮೂಹಿಕ "ಎತ್ತಂಗಡಿ"
ತಮಿಳುನಾಡು ವಿಧಾನಸಭೆಯ ಮಾನ್ಸೂನ್ ಅಧಿವೇಶನವು ಬುಧವಾರ ಪ್ರತಿಪಕ್ಷವಾದ ಎಐಎಡಿಎಂಕೆ ಸದಸ್ಯರನ್ನು ಸಾಮೂಹಿಕವಾಗಿ ಸದನದಿಂದ ಹೊರಗಟ್ಟುವುದರೊಂದಿಗೆ ಆರಂಭ ಪಡೆಯಿತು.

ಮಂಗಳವಾರ ಪಕ್ಷಾಧ್ಯಕ್ಷೆ ಜೆ.ಜಯಲಲಿತಾ ಅವರ ಪೊಯೆಸ್ ಗಾರ್ಡನ್ ನಿವಾಸಕ್ಕೆ ಅತಿಕ್ರಮಣ ನಡೆಸಿದ ವಿಷಯವನ್ನು ಎಐಎಡಿಎಂಕೆ ಸದಸ್ಯರು ಪ್ರಸ್ತಾಪಿಸುತ್ತಿದ್ದರು.

15 ನಿಮಿಷ ಸದನವನ್ನು ಮುಂದೂಡಿದ ಬಳಿಕ ಸಭೆ ಮತ್ತೆ ಸೇರಿದಾಗ, ಎಐಎಡಿಎಂಕೆ ಸಚೇತಕ ಕೆ.ಎ.ಸೆಂಗೊಟ್ಟಿಯನ್ ಅವರು ವಿಷಯ ಪ್ರಸ್ತಾಪಿಸಿದರು. ಡಿಎಂಕೆ ಅಧಿಕಾರಕ್ಕೆ ಬಂದ ಬಳಿಕ ಪ್ರತಿಪಕ್ಷ ನಾಯಕಿ ಜಯಲಲಿತಾ ನಿವಾಸದಲ್ಲಿ ಭದ್ರತಾ ಉಲ್ಲಂಘನೆಯಾಗಿರುವುದು ಇದು ಮೂರನೇ ಬಾರಿ ಎಂದು ಅವರು ಹೇಳಿದರು.

ಭಾರತದಲ್ಲಿ ಎಲ್ಟಿಟಿಇ ನಿಷೇಧಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿರುವ ಜಯಲಲಿತಾ ಅವರಿಗೆ ಎಲ್ಟಿಟಿಇಯಿಂದ ಜೀವ ಬೆದರಿಕೆಯಿರುವುದರಿಂದ ಅವರಿಗೆ ಝಡ್ ಪ್ಲಸ್ ಭದ್ರತೆ ಒದಗಿಸಲಾಗಿತ್ತು. ಡಿಎಂಕೆಯು ಉದ್ದೇಶಪೂರ್ವಕವಾಗಿಯೇ ಆಕೆಯ ಭದ್ರತೆಯನ್ನು ಕಡಿತಗೊಳಿಸಿದೆ ಎಂಬುದು ಅವರ ಆರೋಪ.

ನಕ್ಸಲರು ಮತ್ತು ಎಲ್ಟಿಟಿಇ-ಪರ ತಮಿಳು ತೀವ್ರವಾದಿ ಸಂಘಟನೆಗಳನ್ನು ಮಟ್ಟ ಹಾಕಲು ಎಐಎಡಿಎಂಕೆ ಸರಕಾರವು ಆರಂಭಿಸಿದ್ದ ಅಭಿಯಾನವನ್ನು ನೆನಪಿಸಿದ ಸೆಂಗೊಟ್ಟಿಯನ್ ನೆನಪಿಸಿದರು.
ಮತ್ತಷ್ಟು
ಪೂರ್ಣ ಸಹಭಾಗಿತ್ವಕ್ಕೆ ಭಾರತ ಒತ್ತಾಯ
ದೇಶದ ಮೊದಲ ಮಹಿಳಾ ರಾಜಕೀಯ ಪಕ್ಷ ಪ್ರಾರಂಭ
ಮನಮೋಹನ್ ಮನವರಿಕೆಗೆ ಸಿಪಿಐ(ಎಂ) ಸ್ವಾಗತ
ತಪ್ಪಿತಸ್ಥರಿಗೆ ಮರಣದಂಡನೆಗೆ ಆಗ್ರಹ
ಉದ್ಯಮಿಗಳ ಹತ್ಯೆ:10 ಪೊಲೀಸರು ತಪ್ಪಿತಸ್ಥರು
ಹಕ್ಕು ಬಾಧ್ಯತಾ ಸಮಿತಿಯಿಂದ ರೋನೆನ್‌ಗೆ ಬುಲಾವ್