ಗುಜರಾತ್ ವಿಧಾನಸಭೆಗೆ ಮುನ್ನ ಚುನಾವಣಾ ಆಯೋಗವು ಮಾಡಿರುವ ಹಿರಿಯ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಪಟ್ಟಂತೆ ನರೇಂದ್ರ ಮೋದಿ ಸರಕಾರ, ಚುನಾವಣಾ ಆಯೋಗದ ಕ್ರಮವನ್ನು ಟೀಕಿಸಿದೆ. ಚುನಾವಣಾ ಆಯೋಗವು ಎಂಟು ಅಧಿಕಾರಿಗಳನ್ನು ವರ್ಗಾಯಿಸಿದ್ದು, ವರ್ಗಾವಣೆಯಾಗಿರುವ ಅಧಿಕಾರಿಗಳ ಸ್ಥಾನಕ್ಕೆ ಬೇರೆ ಅಧಿಕಾರಿಗಳ ಹೆಸರು ಸೂಚಿಸುವಂತೆ ಅದು ಸರಕಾರವನ್ನು ಕೇಳಿಕೊಂಡಿದೆ.
ಆದರೆ ಸರಕಾರ ವರ್ಗಾವಣೆಯಿಂದ ಖಾಲಿಯಾಗಿರುವ ಸ್ಥಾನಗಳಿಗೆ ಅಧಿಕಾರಿಗಳ ಹೆಸರನ್ನು ಸೂಚಿಸದೆ, ಹಿರಿಯ ಅದಿಕಾರಿಗಳ ವರ್ಗಾವಣೆಗೆ ಕಾರಣ ಎನು ಎಂದು ಕೇಳಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.
ಸರಕಾರಕ್ಕೆ ಉತ್ತರ ನೀಡಿರುವ ಚುನಾವಣಾ ಆಯೋಗವು ಅಧಿಕಾರಿಗಳ ವರ್ಗಾವಣೆಯ ಅಧಿಕಾರ ತನಗೆ ಸಂವಿಧಾನದತ್ತವಾಗಿದ್ದು, ತಾನು ನೀಡಿರುವ ಆದೇಶಕ್ಕೆ ಮನ್ನಣೆ ನೀಡಬೇಕು ಎಂದು ಕೇಳಿಕೊಂಡಿದೆ. ಇದೇ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷವು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ವಿಧಾನಸಭೆಗೆ ಮುನ್ನ ಪೊಲೀಸ ಮುಖ್ಯಸ್ಥರ ವರ್ಗಾವಣೆಗೆ ಕಾರಣ ಎನು ಎಂದು ಕೇಳಿದೆ.
|