ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಸ್ಲೀಪರ್ ಕೋಚ್‌ಗಳಲ್ಲಿ ಮಧ್ಯದ ಬರ್ತ್
ಇನ್ನೂ ಹೆಚ್ಚು ಪ್ರಯಾಣಿಕರಿಗೆ ಸ್ಥಳಾವಕಾಶ ಕಲ್ಪಿಸಲು ಮತ್ತು ಆದಾಯ ಚೇತರಿಕೆಗೆ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಹೊರತುಪಡಿಸಿ ಉಳಿದ ರೈಲುಗಳ ಬೋಗಿಗಳಲ್ಲಿ ಮಧ್ಯದ ಬರ್ತ್ ಸೇರಿಸಲು ಭಾರತೀಯ ರೈಲ್ವೆ ಯೋಜಿಸಿದೆ. ಮಧ್ಯದ ಬರ್ತ್‌ನ್ನು ನಿಯಮಿತ ಮತ್ತು ಹವಾನಿಯಂತ್ರಿತ ಸ್ಲೀಪರ್ ಬರ್ತ್‌ಗಳಲ್ಲಿ ಅಳವಡಿಸಲಾಗುವುದು.

ಪ್ರಸಕ್ತ ಮೂರು ಹಂತಗಳ ಸ್ಲೀಪರ್ ಬೋಗಿಯಲ್ಲಿ ಎರಡು ಕಡೆ ಬರ್ತ್‌ಗಳಿವೆ.ಹವಾನಿಯಂತ್ರಿತವಲ್ಲದ ಸ್ಲೀಪರ್ ಕೋಚ್‌ನಲ್ಲಿ ಒಟ್ಟು 72 ಬರ್ತ್‌ಗಳಿದ್ದರೆ, ಎಸಿ ತ್ರೀಟೈರ್ ಕೋಚ್‌ನಲ್ಲಿ 64 ಬರ್ತ್‌ಗಳಿವೆ.

ಮೇಲಿನ ಬರ್ತ್‌ನ ಎತ್ತರವನ್ನು ಹೆಚ್ಚಿಸಿ ಮಧ್ಯದಲ್ಲಿ ಇನ್ನೊಂದು ಬರ್ತ್ ಅಳವಡಿಸುವ ಮೂಲಕ ಹವಾನಿಯಂತ್ರಿತೇತರ ಸ್ಲೀಪರ್ ಬೋಗಿಯಲ್ಲಿ 9 ಬರ್ತ್‌ಗಳನ್ನು ಮತ್ತು ಎಸಿ ತ್ರೀ ಟೈಯರ್ ಬೋಗಿಗಳಲ್ಲಿ 8 ಬರ್ತ್‌ಗಳನ್ನು ಸೇರಿಸಲು ರೈಲ್ವೆ ಸಚಿವಾಲಯ ಯೋಜಿಸಿದೆ.

ಈ ರೀತಿ ನಾವು ಜೇಲಮ್ ಎಕ್ಸ್‌ಪ್ರೆಸ್‌ನ ಮೂರು ಬೋಗಿಗಳಲ್ಲಿ ಪ್ರಾಯೋಗಿತ ಆಧಾರದ ಮೇಲೆ ಅಳವಡಿಸಿದ್ದೇವೆ ಎಂದು ಕಾರ್ಯನಿರ್ವಾಹಕ ನಿರ್ದೇಶಕ ನೀರಜ್ ಕುಮಾರ್ ಹೇಳಿದರು.
ಮತ್ತಷ್ಟು
ಚುನಾವಣಾ ಆಯೋಗದ ಕ್ರಮದ ವಿರುದ್ಧ ಟೀಕೆ
ಒಪ್ಪಂದದ ಒಮ್ಮತಕ್ಕೆ ಈಗಲೂ ಪ್ರಯತ್ನ:ಪಿಎಂ
ರಾಜ್ಯ ಕಾಂಗ್ರೆಸ್‌ನಲ್ಲಿ ಬದಲಾವಣೆ ಗಾಳಿ
ಎಐಎಡಿಎಂಕೆ ಶಾಸಕರ ಸಾಮೂಹಿಕ "ಎತ್ತಂಗಡಿ"
ಪೂರ್ಣ ಸಹಭಾಗಿತ್ವಕ್ಕೆ ಭಾರತ ಒತ್ತಾಯ
ದೇಶದ ಮೊದಲ ಮಹಿಳಾ ರಾಜಕೀಯ ಪಕ್ಷ ಪ್ರಾರಂಭ