ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಐಎಡಿಎಂಕೆ ನಾಯಕಿ ಜಯಲಲಿತಾ ತಮ್ಮ ವಿರುದ್ಧ ಮಾಡಿದ ಆರೋಪಗಳಿಗೆ ತಮಿಳುನಾಡು ಸ್ಥಳೀಯಾಡಳಿತ ಸಚಿವ ಎಂ.ಕೆ. ಸ್ಟಾಲಿನ್ ಗುರುವಾರ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸಿದ್ದಾರೆ.
ಸ್ಪೀಕರ್ ಆರ್. ಅವುಡಿಯಪ್ಪನ್ ಈ ವಿಷಯವನ್ನು ಹಕ್ಕುಬಾಧ್ಯತಾ ಸಮಿತಿಗೆ ಒಪ್ಪಿಸಿ, ಜಯಲಲಿತಾ ಆರೋಪಗಳಿಗೆ ಮೇಲ್ನೋಟದ ಸಾಕ್ಷ್ಯಗಳಿವೆ ಎಂದು ಹೇಳಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯೊಳಗೆ ಜಯಾ ಅವರನ್ನು ಕೊಲ್ಲಲು ತಾವು ಸಂಚು ನಡೆಸಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಜಯಲಲಿತಾ ತಿಳಿಸಿದ್ದರೆಂದು ಸ್ಟಾಲಿನ್ ಆರೋಪಿಸಿದ್ದಾರೆ.
ಈ ವರದಿಯು ಅನೇಕ ಸುದ್ದಿಪತ್ರಿಕೆಗಳಲ್ಲಿ ವರದಿಯಾಗಿದೆ. ಇಂತಹ ಆರೋಪಗಳನ್ನು ಮಾಡುವುದು ಜಯಲಲಿತಾಗೆ ಅಭ್ಯಾಸವಾಗಿದೆ. ಆದರೆ ಅದನ್ನು ಸಾಬೀತು ಮಾಡಲು ಅವರು ಮುಂದೆ ಬರಬೇಕು ಎಂದು ಅವರು ನುಡಿದರು.
ತಾವು ಜಯಾ ಆರೋಪಗಳನ್ನು ಕೋರ್ಟ್‌ನಲ್ಲಿ ಎದುರಿಸಲು ಸಿದ್ಧವಿರುವುದಾಗಿ ಹೇಳಿದ ಸ್ಟಾಲಿನ್ ಜಯಲಲಿತಾ, ಜಯಾ ಟಿವಿ ಮತ್ತು ಎರಡು ಸಂಜೆ ಪತ್ರಿಕೆಗಳ ವಿರುದ್ಧ ಹಕ್ಕು ಚ್ಯುತಿ ಮಂಡನೆಗೆ ಸ್ಪೀಕರ್ ಅವರನ್ನು ಕೋರಿದರು.
|