ವಿಷಪೂರಿತ ಆಹಾರ ಸೇವನೆಯಿಂದ ಇನ್ನೂ 7 ಮಂದಿ ಇಲ್ಲಿ ಸಾಯುವುದರೊಂದಿಗೆ ವೈದ್ಯಕೀಯ ಇಲಾಖೆಯ ಇಬ್ಬರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ವಿಷ್ಣಾಪುರ ಗ್ರಾಮದಲ್ಲಿ ಭಾನುವಾರ ಈದ್ ಮೇಳದ ಅಂಗಡಿಯಲ್ಲಿ ವಿಷಪೂರಿತ ಆಹಾರ ಸೇವಿಸಿ 425 ಜನರು ಅಸ್ವಸ್ಥರಾಗಿದ್ದರು.
ಈ ಘಟನೆಯಲ್ಲಿ 8 ಜನರು ಮಂಗಳವಾರ ಸತ್ತಿದ್ದು, ಇನ್ನೂ 7 ಮಂದಿ ಬುಧವಾರ ಸತ್ತರು. ಮುಖ್ಯ ವೈದ್ಯಾಧಿಕಾರಿ ಗುರುವಾರ ಇಬ್ಬರು ಸಿಬ್ಬಂದಿಗಳಾದ ಜೆ.ಕೆ. ಗುಪ್ತಾ ಮತ್ತು ರಂಜನಾ ಎಂಬವರನ್ನು ತಕ್ಷಣವೇ ಅಮಾನತುಗೊಳಿಸಿದರು ಎಂದು ಮೂಲಗಳು ಹೇಳಿವೆ.
ಇದಲ್ಲದೇ ಈ ವಿಷಯದ ಬಗ್ಗೆ ವಾರದಲ್ಲಿ ವರದಿ ನೀಡುವಂತೆ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ಹೆಚ್ಚುವರಿ ನಿರ್ದೇಶಕ ಚತುರ್ವೇದಿ ಆದೇಶಿಸಿದ್ದಾರೆ.
|