ದೆಹಲಿ-ವಾರಣಾಸಿ ಮಾರ್ಗವಾಗಿ ತೆರಳುತ್ತಿದ್ದ ಶಿವಗಂಗ ಎಕ್ಸ್‌ಪ್ರೆಸ್ ರೈಲಿನ ಬೋಗಿಯೊಂದರಲ್ಲಿ ಬುಧವಾರ ಬೆಂಕಿ ಆವರಿಸಿದ್ದರಿಂದ ಒಬ್ಬ ವ್ಯಕ್ತಿ ಸತ್ತಿದ್ದು ಲಕ್ಷಾಂತರ ರೂ. ಬೆಲೆಬಾಳುವ ಪಾರ್ಸೆಲ್‌ಗಳಿಗೆ ನಷ್ಟವುಂಟಾಗಿದೆ ಎಂದು ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ದೆಹಲಿಯಿಂದ ಬರುತ್ತಿದ್ದ ರೈಲಿನಲ್ಲಿ ಚಂದಾರಿ ಮತ್ತು ಚಕೇರಿ ನಿಲ್ದಾಣಗಳ ನಡುವೆ ಎಸ್ಎಲ್ಆರ್ ಪಾರ್ಸೆಲ್ ಬೋಗಿಯಲ್ಲಿ ಬೆಂಕಿ ಹತ್ತಿಕೊಂಡಿತು. ಈ ಬೋಗಿಯಲ್ಲಿ ಕೆಲವು ಪ್ರಯಾಣಿಕರು ಕೂಡ ಕುಳಿತಿದ್ದರು ಎಂದು ಉತ್ತರ ರೈಲ್ವೆಯ ಜನರಲ್ ಮ್ಯಾನೇಜರ್ ತಿಳಿಸಿದ್ದಾರೆ.
ಆ ಬೋಗಿಯಲ್ಲಿ ಕುಳಿತಿದ್ದ ಅಲಹಾಬಾದ್ ಮೂಲದ ಮುನ್ನಿ ಲಾಲ್ ಉಸಿರುಕಟ್ಟಿ ಸತ್ತಿದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕೂಡಲೇ ರೈಲನ್ನು ನಿಲ್ಲಿಸಿ ಬೋಗಿಯಲ್ಲಿ ಕುಳಿತಿದ್ದ ಇನ್ನಿತರ ಪ್ರಯಾಣಿಕರನ್ನು ಇನ್ನೊಂದು ಬೋಗಿಗೆ ವರ್ಗಾಯಿಸಲಾಯಿತು. ಏತನ್ಮಧ್ಯೆ, ಹಾನಿಗೊಂಡ ಬೋಗಿಯನ್ನು ಕಳಚಿ,ರೈಲು ಸಂಚಾರವನ್ನು ಪುನಃ ಆರಂಭಿಸಲಾಗಿದೆ ಎಂದು ಅವರು ತಿಳಿಸಿದರು.
|