ದುರ್ಗಾ ಪೂಜಾ ಸಂದರ್ಭದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ರಾಷ್ಟ್ರದ ಜನತೆಗೆ ಶುಭ ಹಾರೈಸಿದ್ದಾರೆ. ದುರ್ಗಾ ಪೂಜೆಯ ಉತ್ಸವದಲ್ಲಿ ಪ್ರತಿಯೊಬ್ಬರಿಗೂ ಅವರ ಯಶಸ್ಸಿಗೆ, ಸಂತೋಷಕ್ಕೆ ಮತ್ತು ಸಮೃದ್ಧಿಗೆ ಶುಭ ಹಾರೈಕೆ ಮಾಡುವುದಾಗಿ ರಾಷ್ಟ್ರಪತಿ ಸಂದೇಶದಲ್ಲಿ ತಿಳಿಸಿದರು.
ದುರ್ಗಾ ಪೂಜೆ ಆಚರಣೆಯು ದುಷ್ಟ ಶಕ್ತಿಯ ವಿರುದ್ಧ ಶಿಷ್ಟ ಶಕ್ತಿಯ ಗೆಲುವಿನ ಸಂಕೇತವಾಗಿದೆ. ಈ ಸಂದರ್ಭವು ನಮಗೆ ಎಲ್ಲ ಒಳ್ಳೆಯ ಕೆಲಸಗಳಲ್ಲಿ ನಮ್ಮನ್ನು ಮುಡುಪಾಗಿಡಲು ಮತ್ತು ಮಾನವಜನಾಂಗದ ಒಳಿತಿಗಾಗಿ ಕೆಲಸ ಮಾಡಲು ಸ್ಫೂರ್ತಿ ನೀಡುತ್ತದೆಂದು ರಾಷ್ಟ್ರಪತಿ ಹೇಳಿದರು. . ದುರ್ಗಾ ಪೂಜೆ ಬಂಗಾಳಿಗಳಿಗೆ ವಿಶೇಷ ಹಬ್ಬವಾಗಿದೆ. ಪ್ರಾರ್ಥನೆ, ಮೆರವಣಿಗೆ ಮತ್ತು ಸಂಗೀತ ಕಾರ್ಯಕ್ರಮಗಳು ಉತ್ಸವದಲ್ಲಿ ನಡೆಯುತ್ತವೆ. ಈ ಉತ್ಸವದಲ್ಲಿ ದುರ್ಗಾದೇವತೆಯ ಪೂಜೆ ಮುಖ್ಯ ವೈಶಿಷ್ಠ್ಯವಾಗಿದ್ದು, ದಸರಾ ಆಚರಣೆಯೊಂದಿಗೆ ಕೊನೆಗೊಳ್ಳುತ್ತದೆ.
ಕೊನೆಯ ದಿನ ದುರ್ಗಾ ಮೂರ್ತಿಗಳನ್ನು ಸಮುದ್ರ, ನದಿಗಳು ಮತ್ತು ಕೆರೆಗಳಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ದುರ್ಗೆಯು ಜಗತ್ತಿಗೆ ಭೇಟಿ ನೀಡುವುದರಿಂದ ಅದರ ಪ್ರತೀಕವಾಗಿ ಉತ್ಸವಗಳು ನಡೆಯುತ್ತವೆಂದು ಭಕ್ತರು ನಂಬಿದ್ದಾರೆ.
|