ಶಮಿತ್ ಅಮಿನ್ ನಿರ್ಧೇಶನ ಮತ್ತು ಶಾಹರುಖ್ ಖಾನ್ ಅಭಿನಯದ ಬಾಲಿವುಡ್ ಸುಪರ್ ಹಿಟ್ ಚಿತ್ರ ಚಕ್ ದೇ ಇಂಡಿಯಾ ಈ ಬಾರಿಯ ಆಸ್ಟ್ರೇಲಿಯನ್ ಇಂಡಿಯನ್ ಫಿಲ್ಮ್ ಪೆಸ್ಟಿವಲ್‌ನಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಆಸ್ಟ್ರೇಲಿಯದ ನೆಲದಲ್ಲಿ ನಡೆದ ವಿಶ್ವಕಪ್ ಹಾಕಿ ಟೂರ್ನಿಯ ಕಥಾ ಚಿತ್ರವನ್ನು ಒಳಗೊಂಡಿರುವ ಚಿತ್ರವು ಸಿಡ್ನಿ, ಮೇಲ್ಬೋರ್ನ್‌ಗಳಲ್ಲಿ ಚಿತ್ರಿಕರಣಗೊಂಡಿದೆ. ಚಕ್ ದೇ ಇಂಡಿಯಾ ಚಿತ್ರವು 2002 ರ ಮ್ಯಾಂಚೆಸ್ಟರ್ ಕ್ರೀಡಾಕೂಟದಲ್ಲಿ ಭಾರತೀಯ ಮಹಿಳಾ ಹಾಕಿ ತಂಡದ ಗೆಲುವಿನ ಆಧಾರದ ಮೇಲೆ ನಿರ್ಮಾಣವಾಗಿದೆ.
ಗಾಂಧಿ ಮೈ ಫಾದರ್ ಚಿತ್ರದಲ್ಲಿ ಗಾಂಧಿಜಿಯ ಮಗ ಹರಿಲಾಲ್ ಪಾತ್ರದಲ್ಲಿ ನಟಿಸಿರುವ ನಟ ಅಕ್ಷಯ ಖನ್ನಾ ಅವರು ಅತ್ಯುತ್ತಮ ನಟ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಗಾಂಧಿ ಮೈ ಫಾದರ್ ಚಿತ್ರ ಟೊಕಿಯೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದ್ದು ಅಲ್ಲದೆ ಏಷ್ಯಾ ಪೆಸಿಪಿಕ್ ಸ್ಕ್ರೀನ್ ಅವಾರ್ಡ್‌ಗೆ ಕೂಡ ಆಯ್ಕೆಯಾಗಿದೆ.
ಸಿಡ್ನಿಯ ಮ್ಯುಸಿಯಂ ಆಫ್ ಕಂಟಂಪರರಿ ಆರ್ಟ್‌ನಲ್ಲಿ ಈ ಬಾರಿಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಿಸಲಾಯಿತು. ಹತ್ತು ದಿನಗಳ ಕಾಲ ನಡೆಯುವ ಚಲನಚಿತ್ರೋತ್ಸವು ಗಾಂಧಿ ಮೈ ಫಾದರ್ ಚಿತ್ರದ ಪ್ರದರ್ಶನದೊಂದಿಗೆ ಪ್ರಾರಂಭವಾಯಿತು.
|