ಕೇಂದ್ರ ರಕ್ಷಣಾ ಸಚಿವ ಎ.ಕೆ.ಆಂಟೊನಿ ಅವರು ರಷ್ಯದ ಉಪಪ್ರಧಾನಿ ಸರ್ಗೈ ಐವಾನೋವ್ ಅವರನ್ನು ಭೇಟಿ ಮಾಡಿ ಉಭಯ ರಾಷ್ಟ್ರಗಳ ನಡುವೆ ರಕ್ಷಣಾ ಸಹಕಾರ ಸೇರಿದಂತೆ ವ್ಯಾಪಕ ಹಂತದ ದ್ವಿಪಕ್ಷೀಯ ವಿಷಯಗಳನ್ನು ಚರ್ಚಿಸಿದರು.
ಪ್ರಸಕ್ತ ರಕ್ಷಣಾ ಯೋಜನೆಗಳು ಸೇರಿದಂತೆ ಅಡ್ಮೈರಲ್ ಗೋರ್ಶ್‌ಕೋವ್ ವಿಮಾನ ವಾಹಕ ನೌಕೆಯನ್ನು ಮೇಲ್ದರ್ಜೆಗೇರಿಸುವಲ್ಲಿ ಸಮಸ್ಯೆಗಳನ್ನು ಉಭಯ ನಾಯಕರು ಚರ್ಚಿಸಿದರೆಂದು ಹೇಳಲಾಗಿದೆ.
ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ನಿಕಟವರ್ತಿ ಮತ್ತು ಸಂಭವನೀಯ ಉತ್ತರಾಧಿಕಾರಿಯಾಗಿರುವ ಐವಾನೋವ್ ಕೈಗಾರಿಕೆ ಸೇರಿದಂತೆ ಮಿಲಿಟರಿ-ಕೈಗಾರಿಕೆ ಸಂಕೀರ್ಣದ ಮೇಲ್ವಿಚಾರಣೆ ವಹಿಸಿದ್ದಾರೆ.
ಆಂಟೊನಿ ನಾಲ್ಕು ದಿನಗಳ ರಷ್ಯ ಭೇಟಿಯಲ್ಲಿ ರಕ್ಷಣಾ ಸಹಕಾರ ಕಾರ್ಯಕ್ರಮದ ಸಂಚಾಲನಾ ಸಮಿತಿಯಾದ ಐಆರ್‌ಐಜಿಯಲ್ಲಿ ಸಹ ಅಧ್ಯಕ್ಷತೆ ವಹಿಸಿದ ಬಳಿಕ ಶುಕ್ರವಾರ ಸ್ವದೇಶಕ್ಕೆ ವಾಪಸಾಗಿದ್ದಾರೆ.
|