ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಸೇಡು ತೀರಿಸಿಕೊಳ್ಳುತ್ತಿರುವ ಆನೆಗಳು
ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿ ಆನೆಗಳು ಪದೇ ಪದೇ ದಾಳಿ ನಡೆಸುತ್ತಿದ್ದು, ಕಳೆದ ತಿಂಗಳಲ್ಲಿ ಕನಿಷ್ಠ 7 ಮಂದಿಯನ್ನು ಹತ್ಯೆ ಮಾಡಿದೆ. ಆನೆಗಳ ಗುಂಪಿನ ಸಂಗಾತಿ ಆನೆಯೊಂದು ದಾರ್ಸಿಯಲ್ಲಿ ಅಸುನೀಗಿದ ಬಳಿಕ ಆನೆಗಳು ಸೇಡು ತೀರಿಸಿಕೊಳ್ಳಲು ಗ್ರಾಮದ ಮೇಲೆ ದಾಳಿ ನಡೆಸುತ್ತಿದೆ ಎಂದು ಭಯಬೀತ ಗ್ರಾಮಸ್ಥರು ಹೇಳಿದ್ದಾರೆ.

ಆಗಿನಿಂದ ಆನೆಗಳ ಹಿಂಡು ಆ ಪ್ರದೇಶವನ್ನು ತ್ಯಜಿಸಲು ನಿರಾಕರಿಸಿ ಬೆಳೆದುನಿಂತಿರುವ ಬೆಳೆಗಳನ್ನು ಮತ್ತು ಅನೇಕ ಮನೆಗಳನ್ನು ನಾಶ ಮಾಡಿದೆ. ಇತ್ತೀಚಿನ ಘಟನೆಯೊಂದರಲ್ಲಿ ಕಾಡಾನೆಗಳ ದಾಳಿಗೆ ಸಿಕ್ಕಿ ಇಬ್ಬರು ವ್ಯಕ್ತಿಗಳು ಸತ್ತಿದ್ದರು.

ಗ್ರಾಮದ ಜನರು ಮಾತ್ರ ಆಘಾತಕಾರಿ ಸ್ಥಿತಿಯಲ್ಲಿದ್ದು, ಮುಕ್ತವಾಗಿ ಸಂಚರಿಸಲು ಸಾಧ್ಯವಿಲ್ಲದಂತಾಗಿದೆ. ನಮ್ಮ ತಂದೆ ಆಸ್ಪತ್ರೆಗೆ ಹೋಗಿ ಹಿಂತಿರುಗುವಾಗ ಕಾಡಾನೆಗಳ ಹಿಂಡು ದಾಳಿ ನಡೆಸಿತು. ಅವು ಮೊದಲಿಗೆ ಮಾರಿಯಮ್ಮ ಎಂಬ ಮಹಿಳೆಯನ್ನು ಹತ್ಯೆ ಮಾಡಿದ ಬಳಿಕ ನನ್ನ ತಂದೆಯನ್ನು ಕೊಂದವು ಎಂದು ಕೆ. ದಾಸ್ ಎಂಬವರು ತಿಳಿಸಿದರು.

ಅರಣ್ಯಪ್ರದೇಶ ಕುಂಠಿತವಾದ ಬಳಿಕ ಮಾನವ-ಪ್ರಾಣಿಗಳ ನಡುವೆ ಸಂಘರ್ಷ ಸಾಮಾನ್ಯ ಸಂಗತಿಯಾಗಿದ್ದು, ಮಾನವರು ವಾಸಿಸುವ ಸ್ಥಳಕ್ಕೆ ಪ್ರಾಣಿಗಳು ಲಗ್ಗೆ ಹಾಕುತ್ತಿರುವ ಘಟನೆಗಳು ಸಂಭವಿಸುತ್ತಿವೆ.

ಆದರೆ ದೋನುಬಾಯಿ ಗ್ರಾಮದ ನಿವಾಸಿಗಳು ತಮ್ಮ ಸಂಗಾತಿಯ ಸಾವಿಗೆ ಸೇಡು ತೀರಿಸಿಕೊಳ್ಳುತ್ತಿರುವ ಆನೆಗಳ ಕಿರುಕುಳವನ್ನು ಎದುರಿಸುತ್ತಿರುವುದು ಅಪರೂಪದ ಘಟನೆಯಾಗಿದೆ.
ಮತ್ತಷ್ಟು
ರಷ್ಯದ ಉಪಪ್ರಧಾನಿ ಜತೆ ಆಂಟೊನಿ ಮಾತುಕತೆ
ಕರಾಚಿ ದಾಳಿ:ಬಿಜೆಪಿಗೆ ಆಘಾತ
ಸೇತು ಯೋಜನೆ ಕೈಬಿಡಲು ಅಂತಿಮ ಎಚ್ಚರಿಕೆ
ಚಕ್‌ ದೇಗೆ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ
ರೈಲು ನಿಲ್ದಾಣಗಳಲ್ಲಿ ಎನ್‌ಸಿಸಿ ಕೆಡೆಟ್ ನಿಯೋಜನೆ
ಬಾಂಧವ್ಯ ವೃದ್ಧಿಗೊಳಿಸಲು ಪ್ರಯತ್ನ:ಸಿಂಗ್