ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಟಾಡಾ ನ್ಯಾಯಾಲಯ ಬಾಲಿವುಡ್ ನಟ ಸಂಜಯ್ ದತ್‌ಗೆ ಶನಿವಾರ ಹಾಜರಾಗುವಂತೆ ಸೂಚಿಸಿದೆ.
1993ರಲ್ಲಿ ನಡೆದ ಮುಂಬೈ ಸ್ಫೋಟ ಪ್ರಕರಣದಲ್ಲಿ ದತ್ ಅಕ್ರಮವಾಗಿ ಎಕೆ.56 ಬಚ್ಚಿಟ್ಟುಕೊಂಡ ಪರಿಣಾಮ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಆರೋಪಿ ಎಂದು ತೀರ್ಪು ನೀಡಲಾಗಿತ್ತು.
ಕಾನೂನು ಬಾಹಿರವಾಗಿ ಎಕೆ 56ಹೊಂದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯ ಇಂದು ದತ್‌ಗೆ ತೀರ್ಪೀನ ಪ್ರತಿಯನ್ನು ನೀಡಲಿದೆ.
ಟಾಡಾ ಕೋರ್ಟ್ ನೀಡಿದ ಆರು ವರ್ಷಗಳ ಸೆರೆಮನೆವಾಸದ ತೀರ್ಪಿನ ವಿರುದ್ಧ ಸರ್ವೊಚ್ಚನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ವಿಶೇಷ ಟಾಡಾ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಮೋದ್ ಖೋಡೆ ಅವರು ಆರೋಪಿತರ ತೀರ್ಪೀನ ಪ್ರತಿಯ ಆದೇಶ ಸರಿಯಾದ ಸಮಯಕ್ಕೆ ನೀಡಲು ವಿಫಲರಾದ ಹಿನ್ನೆಲೆಯಲ್ಲಿ 2007ರ ಆಗೋಸ್ಟ್‌ನಲ್ಲಿ ಮಧ್ಯಂತರ ಜಾಮೀನು ನೀಡಿತ್ತು. ದೇಶದ ಆರ್ಥಿಕ ವಹಿವಾಟಿನ ಕೇಂದ್ರಬಿಂದುವಾಗಿದ್ದ ಮುಂಬೈ ನಗರಿಯ ಮೇಲೆ 1993ರ ಮಾರ್ಚ್ 12ರಂದು ನಡೆಸಿದ ಸರಣಿ ಬಾಂಬ್ ಸ್ಫೋಟದಲ್ಲಿ 275ಮಂದಿ ಬಲಿಯಾಗಿದ್ದರು.
|