ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಮಾನವ ಕಳ್ಳಸಾಗಣೆ 25 ಜನರ ಬಂಧನ
ಮಹಿಳೆಯರು ಮಕ್ಕಳು ಸೇರಿದಂತೆ ಸುಮಾರು 200 ಜನರನ್ನು ಆಕ್ರಮವಾಗಿ ಹೈದರಾಬಾದ್ ನಗರಕ್ಕೆ ಸಾಗಿಸುತ್ತಿದ್ದ 25 ಜನ ಮಾನವ ಕಳ್ಳ ಸಾಗಾಣಿಕೆದಾರರನ್ನು ಬೊಲಂಗಿರ್ ಪೊಲೀಸರು ಬಂಧಿಸಿದ್ದಾರೆ.

ಓರಿಸ್ಸಾದ ಬೊಲಂಗಿರ್ ಮತ್ತು ಸೋನಪುರ್ ಜಿಲ್ಲೆಗಳಿಗೆ ಸೇರಿರುವ ಕಾರ್ಮಿಕರನ್ನು ಹೈದರಾಬಾದ್ ನಗರಕ್ಕೆ ಸಾಗಿಸಲಾಗುತ್ತಿತ್ತು ಕಳೆದ ಒಂದು ವಾರದಿಂದ ಸ್ಥಳಿಯ ಕಾರ್ಮಿಕ ಗುತ್ತಿಗೆದಾರರ ನೆರವಿನಿಂದ ಪೊಲೀಸರು ದಾಳಿ ನಡೆಸಿ ಮಾನವ ಸಾಗಣೆಯನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಬೊಲಂಗಿರ್ ಎಸ್ ಪಿ ಹಿಮಾಂಗ್ಸು ಕುಮಾರ ಮಾದ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ.

70 ಜನ ಕಾರ್ಮಿಕರನ್ನು ತುರ್ಕೆಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕಾಡಿನಲ್ಲಿ ಬಂಧಿಸಿ ಇಡಲಾಗಿದ್ದು. 30 ಕಾರ್ಮಿಕರನ್ನು ತಿತಾಲಗರ್ ರೈಲ್ವೆ ನಿಲ್ದಾಣದಲ್ಲಿ ಇರಿಸಲಾಗಿತ್ತು ಇನ್ನುಳಿದ ಕಾರ್ಮಿಕರನ್ನು ಬೆಲಪಾರಾ ಮತ್ತು ಇತರ ಪೊಲೀಲಸ್ ಠಾಣೆಗಳ ವ್ಯಾಪ್ತಿಯಲ್ಲಿ ಬರುವ ಸ್ಥಳಗಳಲ್ಲಿ ದಾಳಿ ಮಾಡಿ ರಕ್ಷಿಸಲಾಗಿದೆ ಎಂದು

ದಸರಾ ಹಬ್ಬದ ನಂತರ ಪಶ್ಚಿಮ ಓರಿಸ್ಸಾದಲ್ಲಿ ವಾಸಿಸುವ ಸಣ್ಣ ರೈತರು ಆಂದ್ರ ಪ್ರದೇಶ ಮುಂತಾದ ಸ್ಥಳಗಳಿಗೆ ಆರು ತಿಂಗಳುಗಳ ಕಾಲ ವಲಸೆ ಹೋಗುವುದು ಸಾಮಾನ್ಯವಾಗಿದ್ದು. ಈ ವಲಸೆಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವುದಕ್ಕೆ ಆಂದ್ರ ಮೂಲದ ಕಾರ್ಮಿಕ ಗುತ್ತಿಗೆದಾರರು ಮುಂದಾಗಿ ಇಲ್ಲಿನ ಸ್ಥಳಿಯ ಎಜೆಂಟರುಗಳಿಗೆ ಮತ್ತು ಕಾರ್ಮಿಕರಿಗೆ ಆಕರ್ಷಕ ಹಣ ನೀಡಿ ತಮ್ಮ ರಾಜ್ಯಗಳಿಗೆ ಕರೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ.
ಮತ್ತಷ್ಟು
ಮುಂಬೈ ಸ್ಫೋಟ :ಸಂಜಯ್ ಟಾಡಾ ನ್ಯಾಯಾಲಯಕ್ಕೆ
ನೈತಿಕ ಹಕ್ಕು ಮಾತಿಗೆ ಬಿಜೆಪಿ ಅನರ್ಹ
ಸೇಡು ತೀರಿಸಿಕೊಳ್ಳುತ್ತಿರುವ ಆನೆಗಳು
ರಷ್ಯದ ಉಪಪ್ರಧಾನಿ ಜತೆ ಆಂಟೊನಿ ಮಾತುಕತೆ
ಕರಾಚಿ ದಾಳಿ:ಬಿಜೆಪಿಗೆ ಆಘಾತ
ಸೇತು ಯೋಜನೆ ಕೈಬಿಡಲು ಅಂತಿಮ ಎಚ್ಚರಿಕೆ