ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ನ.2008ರೊಳಗೆ ರಾಮಸೇತು ಯೋಜನೆ
ರಾಮ ಸೇತು ನಾಶದ ವಿರುದ್ಧ ವಿವಿಧ ಭಾಗಗಳಿಂದ ತೀವ್ರ ಪ್ರತಿರೋಧ ವ್ಯಕ್ತವಾದರೂ ಹಿಂಜರಿಯದ ಕೇಂದ್ರ ನೌಕಾ ಮತ್ತು ಭೂಸಾರಿಗೆ ಸಚಿವ ಟಿ.ಆರ್.ಬಾಲು ನವೆಂಬರ್ 2008ರೊಳಗೆ ಬಹುಕೋಟಿ ರೂ. ವೆಚ್ಚದ ಯೋಜನೆ ಮುಗಿಸುವುದಾಗಿ ಭಾನುವಾರ ಹೇಳಿದ್ದಾರೆ.

ಮುಂದಿನ ವರ್ಷದ ನವೆಂಬರ್‌ನೊಳಗೆ ಯೋಜನೆ ಮುಗಿಸಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಧಾನಮಂತ್ರಿ ಮನಮೋಹನ ಸಿಂಗ್ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಸಮ್ಮುಖದಲ್ಲಿ ಮೊದಲ ನೌಕೆಯ ಪ್ರಯಾಣಕ್ಕೆ ಹಸಿರುನಿಶಾನೆ ನೀಡಲಿದ್ದಾರೆ ಎಂದು ಅವರು ತಿಳಿಸಿದರು.

ಉಚಿತ ವೈದ್ಯಕೀಯ ಶಿಬಿರ ಉದ್ಘಾಟಿಸಿದ ಬಳಿಕ ಅವರು ವರದಿಗಾರರ ಜತೆ ಮಾತನಾಡುತ್ತಿದ್ದರು. ಸೇತುಸಮುದ್ರಂ ಯೋಜನೆಯನ್ನು ಕೈಬಿಡುವುದೇ ಲೇಸು ಎಂದು ಅಣ್ಣಾಡಿಎಂಕೆ ನಾಯಕಿ ಜಯಲಲಿತಾ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜನರಿಂದ ತಿರಸ್ಕೃತರಾದ ಅವರು ಸುದ್ದಿಯಲ್ಲಿರಲು ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ನುಡಿದರು.

ಕೇಂದ್ರ ಸರ್ಕಾರವು ಯೋಜನೆಯ ಪರಿಶೀಲನೆಗೆ ಸಮಿತಿಯೊಂದನ್ನು ರಚಿಸಿದೆ. ಸಾರ್ವಜನಿಕರು ಅ.31ರವರೆಗೆ ತಮ್ಮ ಅಭಿಪ್ರಾಯ ನೀಡಬಹುದು ಎಂದು ಅವರು ನುಡಿದರು.
ಮತ್ತಷ್ಟು
ಸೇತುಸಮುದ್ರಂ: ಹಿಂದು ಪ್ರಾತಿನಿಧ್ಯಕ್ಕೆ ಒತ್ತಾಯ
ಸೋನಿಯಾ ಬೆನಜೀರ್ ಮಾತುಕತೆ
ಮಾನವ ಕಳ್ಳಸಾಗಣೆ 25 ಜನರ ಬಂಧನ
ಮುಂಬೈ ಸ್ಫೋಟ :ಸಂಜಯ್ ಟಾಡಾ ನ್ಯಾಯಾಲಯಕ್ಕೆ
ನೈತಿಕ ಹಕ್ಕು ಮಾತಿಗೆ ಬಿಜೆಪಿ ಅನರ್ಹ
ಸೇಡು ತೀರಿಸಿಕೊಳ್ಳುತ್ತಿರುವ ಆನೆಗಳು