ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಅಣು ಒಪ್ಪಂದ: ಇಂದು ಸ್ಪಷ್ಟ ನಿರ್ಧಾರ
ಭಾರತ ಹಾಗೂ ಅಮೆರಿಕ ನಡುವಿನ ಪರಮಾಣು ಒಪ್ಪಂದವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆಯೋ ಎಂಬುವುದರ ಬಗ್ಗೆ ಯುಪಿಎ ಸರಕಾರ, ಸೋಮವಾರ ನಡೆಯಲಿರುವ ಅಣು ಒಪ್ಪಂದ ಜಂಟಿ ಸಮಿತಿಯಲ್ಲಿ ಸ್ಪಷ್ಟ ನಿರ್ಧಾರ ಪ್ರಕಟಿಸಲಿದೆ.

ನೋಟಕ್ಕೆ ಇದು ನಿರ್ಧಾರಿತ ವಿಚಾರವಾದರೂ, ಇಂದು ನಡೆಯುತ್ತಿರುವ ಸಭೆಯು ಮಧ್ಯಂತರ ಚುನಾವಣೆಗೆ ನೇರ ವೇದಿಕೆ ಒದಗಿಸಿಕೊಡುವ ಸಾಧ್ಯತೆ ಇದೆ

ಮುಂದಿನ ವರ್ಷ ಬುಷ್ ನೇತೃತ್ವದ ಸರಕಾರವು ಕೊನೆಗೊಂಡು ನಂತರ ರಚಿತವಾಗುವ ನೂತನ ಅಮೆರಿಕ ಆಡಳಿತವು ಕಚೇರಿಯು ತಮಗೆ ಸಹಾಯ ನೀಡುವವರೆಗೂ ಈ ಒಪ್ಪಂದವನ್ನು ಸ್ಥಗಿತಗೊಳಿಸಬೇಕು ಎಂಬ ಎಡರಂಗದ ಬೇಡಿಕೆಗೆ ಪ್ರಧಾನಿ ಮನಮೋಹನ್ ಸಿಂಗ್ ಅವರು ತೀರ ಬೇಸರ ವ್ಯಕ್ತಪಡಿಸಿದ್ದಾರೆ.

ಯುಪಿಎ ಇಂದು ಯಾವ ನಿರ್ಣಯ ಕೈಗೊಳ್ಳುತ್ತದೆ ಎಂಬುವುದರ ಕುರಿತು ನಾವು ಇನ್ನೂ ತಿಳಿದುಕೊಂಡಿಲ್ಲ. ಆದರೆ, ಒಪ್ಪಂದವನ್ನು ಸ್ಥಗಿತಗೊಳಿಸುತ್ತಾರೊ ಅಥವಾ ಅದರಂತೆ ಮುನ್ನಡೆಯುತ್ತಾರೊ ಎಂಬುವುದಾಗಿ ಸ್ಪಷ್ಟಪಡಿಸಬೇಕು ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಎ.ಬಿ.ಬರ್ಧನ್ ಹೇಳಿದ್ದಾರೆ.

ಅಮೆರಿಕದಲ್ಲಿ ನೂತನ ಆಡಳಿತ ಬರುವವರೆಗ ಯುಪಿಎ ಕಾಯುವಂತೆ ಸಲಹೆ ನೀಡಿದ್ದೇವೆ. ಈ ಕುರಿತು ಅವರ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬನ್ನಿ. ನಂತರ ಮುಂದುವರೆಸಿ ಎಂದು ಸಿಪಿಐ-ಎಂ ಪಾಲಿಟ್‌ಬ್ಯೂರೊ ಸದಸ್ಯ ಸೀತಾರಾಮ್ ಯೆಚೂರಿ ಅವರು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಹೇಳಿದರು.

ಇದುವರೆಗೆ ಅಣು ಒಪ್ಪಂದ ಜಂಟಿ ಸಮಿತಿಯು ಹಲವಾರು ಬಾರಿ ಸಭೆಗಳನ್ನು ನಡೆಸಿದೆ. ಇಂದು ನಡೆಯುತ್ತಿರುವ ಸಭೆ ಅಂತಿಮವಾಗಿದ್ದು, ಎಡರಂಗವು ತನ್ನ ಅಂತಿಮ ವರದಿಯನ್ನು ದೀಪಾವಳಿ ನಂತರ ಪ್ರಕಟಿಸಲಿದೆ ಎಂದು ಯೆಚೂರಿ ಹೇಳಿದರು.
ಮತ್ತಷ್ಟು
ನ.2008ರೊಳಗೆ ರಾಮಸೇತು ಯೋಜನೆ
ಸೇತುಸಮುದ್ರಂ: ಹಿಂದು ಪ್ರಾತಿನಿಧ್ಯಕ್ಕೆ ಒತ್ತಾಯ
ಸೋನಿಯಾ ಬೆನಜೀರ್ ಮಾತುಕತೆ
ಮಾನವ ಕಳ್ಳಸಾಗಣೆ 25 ಜನರ ಬಂಧನ
ಮುಂಬೈ ಸ್ಫೋಟ :ಸಂಜಯ್ ಟಾಡಾ ನ್ಯಾಯಾಲಯಕ್ಕೆ
ನೈತಿಕ ಹಕ್ಕು ಮಾತಿಗೆ ಬಿಜೆಪಿ ಅನರ್ಹ