ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಭಯೋತ್ಪಾದನೆ: ಭಾರತ-ಪಾಕ್ ಮಾತುಕತೆ
ಭಾರತ-ಪಾಕಿಸ್ತಾನ ಭಯೋತ್ಪಾದನಾ ವಿರೋಧಿ ವ್ಯವಸ್ಥೆ ಸಭೆಯು ಸೋಮವಾರ ದೆಹಲಿಯಲ್ಲಿ ನಡೆಯಲಿದ್ದು, ಇತ್ತೀಚೆಗೆ ನಡೆದ ಹೈದರಾಬಾದ್ ಬಾಂಬ್ ದಾಳಿಯ ವಿಷಯವನ್ನು ಭಾರತವು ಈ ಸಭೆಯಲ್ಲಿ ಪ್ರಕಟಿಸಲಿದೆ.

ಭಾರತ-ಪಾಕಿಸ್ತಾನ ಜಂಟಿ ಭಯೋತ್ಪಾದನಾ ವಿರೋಧಿ ವ್ಯವಸ್ಥೆಯ ಎರಡನೇ ಸುತ್ತಿನ ಸಭೆಯು ಅಕ್ಟೋಬರ್ 22ರಂದು ದೆಹಲಿಯಲ್ಲಿ ನಡೆಯಲಿದೆ ಎಂದು ಬಾಹ್ಯ ಆಂತರಿಕ ವ್ಯವಹಾರ ಸಚಿವಾಲಯದ ಹೇಳಿಕೆಗಳು ತಿಳಿಸಿವೆ.

ಆಗಸ್ಟ್ 15ರಂದು 44 ಜನರ ಸಾವಿಗೆ ಕಾರಣವಾದ ಹೈದರಾಬಾದ್ ಬಾಂಬ್ ಸ್ಫೋಟದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಭಯೋತ್ಪಾದಕರು ಭಾಗಿಯಾಗಿದ್ದಾರೆ ಎಂಬುದಾಗಿ ತಪಾಸಣೆಗಾರರು ಸಂಶಯಪಟ್ಟಿದ್ದರು.

ಭಯೋತ್ಪಾದನೆ ವಿರೋಧಿ ವ್ಯವಸ್ಥೆಯು ಎರಡೂ ದೇಶಗಳ ನಡುವಿನ ಭಯೋತ್ಪಾದನೆ ಹೋರಾಟಕ್ಕೆ ಸಹಕಾರ ನೀಡಲು ಸ್ಥಾಪಿಸಲ್ಪಟ್ಟಿದೆ ಎಂದು ಪರಿಗಣಿಸಲ್ಪಟ್ಟು ಭಾರತೀಯ ಅಧಿಕಾರಿಗಳು ಹೈದರಾಬಾದ್ ವಿಷಯವನ್ನು ಈ ಸಭೆಯಲ್ಲಿ ಪ್ರಕಟಿಸಲಿದ್ದಾರೆ.

ಬಾಹ್ಯ ಆಂತರಿಕ ವ್ಯವಹಾರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಕೆ.ಸಿ.ಸಿಂಗ್ ಭಾರತವನ್ನು ಪ್ರತಿನಿಧಿಸಲಿದ್ದಾರೆ.



ಮತ್ತಷ್ಟು
ಸಂಜಯ್ ದತ್ ಮರಳಿ ಯರವಾಡ ಜೈಲಿಗೆ?
ಅಣು ಒಪ್ಪಂದ: ಇಂದು ಸ್ಪಷ್ಟ ನಿರ್ಧಾರ
ನ.2008ರೊಳಗೆ ರಾಮಸೇತು ಯೋಜನೆ
ಸೇತುಸಮುದ್ರಂ: ಹಿಂದು ಪ್ರಾತಿನಿಧ್ಯಕ್ಕೆ ಒತ್ತಾಯ
ಸೋನಿಯಾ ಬೆನಜೀರ್ ಮಾತುಕತೆ
ಮಾನವ ಕಳ್ಳಸಾಗಣೆ 25 ಜನರ ಬಂಧನ