ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಪೊಲೀಸ್ ರಕ್ಷಣೆ ಕೋರಿದ ಚಿರಂಜೀವಿ ಪುತ್ರಿ
ತೆಲುಗು ಸೂಪರ್‌ಸ್ಟಾರ್ ಚಿರಂಜೀವಿ ಅವರ ವಿವಾಹಿತ ಪುತ್ರಿ ಮತ್ತು ಅಳಿಯ ತಮಗೆ ಜೀವಬೆದರಿಕೆಯಿದೆಯೆಂದು ಶಂಕಿಸಿದ್ದು, ಈ ಕುರಿತು ಪೋಲೀಸ್ ರಕ್ಷಣೆ ಕೋರಿ ದೆಹಲಿ ಹೈಕೋರ್ಟ್‌ಗೆ ಭಾನುವಾರ ಮೊರೆ ಹೋಗಿದ್ದಾರೆ.

ಚಾರ್ಟರ್ಡ್ ಅಕೌಂಟೆಂಟ್ ವಿದ್ಯಾರ್ಥಿನಿಯಾದ ಚಿತ್ರನಟನ ಪುತ್ರಿ ಶ್ರೀಜಾ, ಕುಟುಂಬದ ಇಚ್ಛೆಗೆ ವಿರುದ್ಧವಾಗಿ ತನ್ನ ಪ್ರಿಯತಮ ಸಿರೀಶ್ ಭಾರದ್ವಾಜ್ ಅವರನ್ನು ಅ.17ರಂದು ಹೈದರಾಬಾದ್‌ನ ಆರ್ಯಸಮಾಜ ದೇವಸ್ಥಾನದಲ್ಲಿ ವರಿಸುವ ಮೂಲಕ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದರು.

ದಂಪತಿಯು ಕಾನೂನುಬದ್ಧವಾಗಿ ವಿವಾಹವಾಗಿದ್ದರೂ, ಚಿರಂಜೀವಿ ಪ್ರಭಾವಿ ವ್ಯಕ್ತಿಯಾದ್ದರಿಂದ ದಂಪತಿಗೆ ಜೀವಬೆದರಿಕೆಯಿದೆ ಎಂದು ಅವರ ವಕೀಲೆ ಪಿಂಕಿ ಆನಂದ್ ಮುಖ್ಯನ್ಯಾಯಮೂರ್ತಿ ಎಂ.ಕೆ. ಶರ್ಮಾ ಮತ್ತು ನ್ಯಾಯಮೂರ್ತಿ ಸಂಜೀವ್ ಖನ್ನಾ ವಿಭಾಗೀಯ ಪೀಠಕ್ಕೆ ಅರಿಕೆ ಮಾಡಿದ್ದರು. ದಂಪತಿ ರಾಜಧಾನಿಗೆ ಆಗಮಿಸುವ ಮುಂಚೆ ಪ್ರಾಣಭಯದಿಂದ ಅನೇಕ ಕಾರುಗಳನ್ನು ಬದಲಿಸಿದ್ದಾರೆಂದೂ ಅವರು ಹೇಳಿದರು.

ತುರ್ತಾಗಿ ಈ ಪ್ರಕರಣವನ್ನು ಎತ್ತಿಕೊಳ್ಳುವಂತೆ ಅವರು ಆಗ್ರಹಿಸಿದರು. ಅವರ ಹೇಳಿಕೆಯನ್ನು ಪರಿಗಣಿಸಿದ ಪೀಠ ಸೋಮವಾರ ಎರಡು ಗಂಟೆಗೆ ವಿಚಾರಣೆಯನ್ನು ಆರಂಭಿಸಿತು. ತಮ್ಮ ಕಿರಿಯ ಪುತ್ರಿ ಶ್ರೀಜಾ ರಹಸ್ಯ ವಿವಾಹದ ಬಗ್ಗೆ ಮೌನ ಮುರಿದ ಚಿರಂಜೀವಿ ದಂಪತಿಗೆ ಶುಭ ಹಾರೈಸಿದ್ದಾರೆ. ಆದರೆ ವಿವಾಹಕ್ಕೆ ಒಪ್ಪಿಗೆ ಬಗ್ಗೆ ಪ್ರಶ್ನಿಸಿದಾಗ ಅವರು ಮೌನ ತಾಳಿದ್ದಾರೆ.
ಮತ್ತಷ್ಟು
ಭಯೋತ್ಪಾದನೆ: ಭಾರತ-ಪಾಕ್ ಮಾತುಕತೆ
ಸಂಜಯ್ ದತ್ ಮರಳಿ ಯರವಾಡ ಜೈಲಿಗೆ?
ಅಣು ಒಪ್ಪಂದ: ಇಂದು ಸ್ಪಷ್ಟ ನಿರ್ಧಾರ
ನ.2008ರೊಳಗೆ ರಾಮಸೇತು ಯೋಜನೆ
ಸೇತುಸಮುದ್ರಂ: ಹಿಂದು ಪ್ರಾತಿನಿಧ್ಯಕ್ಕೆ ಒತ್ತಾಯ
ಸೋನಿಯಾ ಬೆನಜೀರ್ ಮಾತುಕತೆ