ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ದಸರಾ ಆಚರಣೆಗೆ ಸರಕಾರಿ ಇಲಾಖೆ ಅಡ್ಡಿ: ಆರೋಪ
ದಸರಾ ಆಚರಣೆಯ ಕಾರ್ಯಕ್ರಮದಲ್ಲಿ ಕೆಲವು ಸರಕಾರಿ ಇಲಾಖೆಗಳು ವಿಧ್ವಂಸಕ ಕೃತ್ಯ ನಡೆಸಲು ಪ್ರಯತ್ನಿಸಿದೆ ಎಂದು ಕಾಶ್ಮೀರಿ ಪಂಡಿತ್ ಸಂಘರ್ಷ ಸಮಿತಿಯು ಆರೋಪಿಸಿದೆ.

ಜಿಲ್ಲಾ ಮ್ಯಾಜಿಸ್ಟ್ರೇಟಿನ ಅನುಮತಿಯಿದ್ದರೂ, ಕೆಲವು ಸರಕಾರಿ ಇಲಾಖೆಗಳು ಅನಗತ್ಯ ಕಾರಣದಿಂದ ದಸರಾ ಹಬ್ಬವನ್ನು ಹಾಳುಮಾಡಲು ಪ್ರಯತ್ನಿಸಿವೆ ಎಂದು ಕೆಪಿಪಿಎಸ್ ಹೇಳಿಕೆಗಳು ತಿಳಿಸಿವೆ.

ಜಮ್ಮು ಕಾಶ್ಮೀರದಲ್ಲಿ ಹಬ್ಬವನ್ನು ನಡೆಸಲು ಸಹಕಾರ ನೀಡಿದ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಗುಲಾಂ ನಬಿ ಅಜಾದ್ ಮತ್ತು ಅವರ ಪತ್ನಿ ಶಮೀಮಾ ಅಜಾದ್ ಅವರಿಗೆ ಧನ್ಯವಾದ ಅಲ್ಲದೆ ಕಳೆದ 15 ವರ್ಷದಿಂದ ನಮಗೆ ಸಹಕಾರ, ಬೆಂಬಲ ನೀಡುತ್ತಿರುವ ಬಹುಸಂಖ್ಯಾತ ಪಂಗಡಕ್ಕೆ ನಾವು ಧನ್ಯವಾದ ಸಲ್ಲಿಸುತ್ತೇವೆ ಎಂದು ಈ ಸಂಘಟನೆಯು ತಿಳಿಸಿದೆ.

15 ವರ್ಷಗಳ ನಂತರ ಜಮ್ಮು ಕಾಶ್ಮೀರದಲ್ಲಿ ನೂರಾರು ಕಾಶ್ಮೀರಿ ಪಂಡಿತರು ದಸರಾ ಹಬ್ಬವನ್ನು ಆಚರಿಸಿದರು. ಇಂತಹ ಧಾರ್ಮಿಕ ಸಮಾರಂಭವನ್ನು ಮುಂದುವರಿಸುವಂತೆ ನಮ್ಮ ಮುಸ್ಲಿಮ್ ಸಹೋದರರು ಪ್ರೋತ್ಸಾಹ ನೀಡಿದ್ದಾರೆ.18 ವರ್ಷಗಳ ನಂತರ ಶ್ರೀನಗರದಲ್ಲಿ ಶೋಭಾಯಾತ್ರೆಯನ್ನು ನಡೆಸಿದ್ದು, ನೂರಾರು ಮುಸ್ಲಿಮರು ಇದರಲ್ಲಿ ಭಾಗಿಯಾಗಿದ್ದರು ಎಂದು ಕೆಪಿಪಿಎಸ್ ಅಧ್ಯಕ್ಷ ಸಂಜಯ್ ಕೆ.ಟಿಕೂ ಹೇಳಿದ್ದಾರೆ.
ಮತ್ತಷ್ಟು
ಪೊಲೀಸ್ ರಕ್ಷಣೆ ಕೋರಿದ ಚಿರಂಜೀವಿ ಪುತ್ರಿ
ಭಯೋತ್ಪಾದನೆ: ಭಾರತ-ಪಾಕ್ ಮಾತುಕತೆ
ಸಂಜಯ್ ದತ್ ಮರಳಿ ಯರವಾಡ ಜೈಲಿಗೆ?
ಅಣು ಒಪ್ಪಂದ: ಇಂದು ಸ್ಪಷ್ಟ ನಿರ್ಧಾರ
ನ.2008ರೊಳಗೆ ರಾಮಸೇತು ಯೋಜನೆ
ಸೇತುಸಮುದ್ರಂ: ಹಿಂದು ಪ್ರಾತಿನಿಧ್ಯಕ್ಕೆ ಒತ್ತಾಯ