ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಟಾಡಾ ಕೋರ್ಟ್‌ಗೆ ಸಂಜಯ್ ದತ್ ಶರಣು
PTI
ಮುಂಬೈ ಬಾಂಬ್ ಸ್ಫೋಟದ ತೀರ್ಪಿನ ಪ್ರತಿಯನ್ನು ಬಾಲಿವುಡ್ ಚಿತ್ರನಟ ಸಂಜಯ್ ದತ್ ಅವರಿಗೆ ಸೋಮವಾರ ಹಸ್ತಾಂತರಿಸಿದ ಕೂಡಲೇ ದತ್ ಟಾಡಾ ಕೋರ್ಟ್‌ಗೆ ಶರಣಾದರು. ಸುಪ್ರೀಂಕೋರ್ಟ್ ನೀಡಿದ್ದ ಮಧ್ಯಂತರ ಜಾಮೀನಿನಿಂದ ಎರಡು ತಿಂಗಳ ಕಾಲ ಜೈಲಿನಿಂದ ಹೊರಗೆ ಮುಕ್ತವಾಗಿ ಓಡಾಡಿಕೊಂಡಿದ್ದ ಸಂಜಯ್ ದತ್ ಸ್ವಾತಂತ್ರ್ಯಕ್ಕೆ ಈಗ ತೆರೆ ಬಿದ್ದಿದೆ.

ದತ್ ಅವರನ್ನು ಕಸ್ಟಡಿಗೆ ತೆಗೆದುಕೊಂಡು ಆರ್ಥರ್ ರಸ್ತೆ ಜೈಲಿನಲ್ಲಿ ಇರಿಸಲಾಗಿದೆ. ಅಲ್ಲಿಂದ ಅವರನ್ನು ಸೋಮವಾರ ಸಂಜೆ ಯರವಾಡ ಜೈಲಿಗೆ ವರ್ಗಾಯಿಸಲಾಗುವುದು. ನೀಲಿ ಶರ್ಟ್ ಮತ್ತು ಜೀನ್ಸ್ ತೊಟ್ಟಿದ್ದ ದತ್ ಅವರು ವಕೀಲ ಸತೀಶ್‌ಮನೆ ಶಿಂಧೆ ಜತೆಗೂಡಿ ಬೆಳಿಗ್ಗೆ 11 ಗಂಟೆಗೆ ಕೋರ್ಟ್‌ಗೆ ಹಾಜರಾದರು. ಆದಾಗ್ಯೂ ಅವರಿಗೆ ಸಂಜೆ 4.20ಕ್ಕೆ ತೀರ್ಪಿನ ಪ್ರತಿ ನೀಡಲಾಯಿತು.

ಪ್ರತಿಯನ್ನು ಸ್ವೀಕರಿಸಿದ ಬಳಿಕ ತಮ್ಮ ಕಕ್ಷಿದಾರರು ಸುಪ್ರೀಂಕೋರ್ಟ್ ಆದೇಶಕ್ಕೆ ಬದ್ಧವಾಗಿರುವುದರಿಂದ ಟಾಡಾ ಕೋರ್ಟ್‌ಗೆ ಶರಣಾಗಿದ್ದಾಗಿ ಹೇಳಿದರು.ತಮ್ಮ ಸೋದರಿ ಪ್ರಿಯಾ ಮತ್ತು ಪುತ್ರಿ ತ್ರಿಶಾಲಾ ಜತೆ ಫೋನ್‌ ಸಂಭಾಷಣೆಗೆ ಸಂಜಯ್ ದತ್‌ಗೆ ಅವಕಾಶ ನೀಡಬೇಕೆಂದು ಅವರು ಕೋರಿದಾಗ ಕೋರ್ಟ್ ಅನುಮತಿ ನೀಡಿತು.

1993ರ ಮುಂಬೈ ಬಾಂಬ್ ಸ್ಫೋಟದಲ್ಲಿ 6 ವರ್ಷಗಳ ಕಠಿಣ ಶಿಕ್ಷೆಗೆ ಗುರಿಯಾಗಿರುವ ದತ್ ಮತ್ತು ಇನ್ನಿತರ ತಪ್ಪಿತಸ್ಥರು ತಮಗೆ ತೀರ್ಪಿನ ಪ್ರತಿ ನೀಡದಿದ್ದರಿಂದ ಮಧ್ಯಂತರ ಜಾಮೀನು ನೀಡಬೇಕೆಂದು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಅವರಿಗೆ ಮದ್ಯಂತರ ಜಾಮೀನು ದಯಪಾಲಿಸಲಾಗಿತ್ತು.

ದತ್ ಪರವಾಗಿ ಅವರ ವಕೀಲರು ಸುಪ್ರೀಂಕೋರ್ಟ್‌ನಲ್ಲಿ ಕಾಯಂ ಜಾಮೀನಿಗೆ ಅರ್ಜಿ ಸಲ್ಲಿಸುವರೆಂದು ನಿರೀಕ್ಷಿಸಲಾಗಿದೆ. ದತ್ ಅವರಿಗೆ ಕಾಯಂ ಜಾಮೀನು ನೀಡುವಂತೆ ವಿವಿಧ ಕಾರಣಗಳ ಆಧಾರದ ಮೇಲೆ ಕೋರಲು ನಿರ್ಧರಿಸಲಾಗಿದೆ. ಮೊದಲನೆಯದಾಗಿ ಶಸ್ತ್ರಾಸ್ತ್ರ ಕಾಯ್ದೆಯಡಿ ದತ್ ತಪ್ಪಿತಸ್ಥರಾಗಿದ್ದು, ಭಯೋತ್ಪಾದಕರೆಂದು ರುಜುವಾತಾಗಿಲ್ಲ,

ಎರಡನೆಯದಾಗಿ ಜೈಲಿನಿಂದ ಹೊರಗಿದ್ದಾಗ 10 ವರ್ಷಗಳವರೆಗೆ ಅವರು ಸನ್ನಡತೆಯಿಂದ ವರ್ತಿಸಿದ್ದಾರೆ. ಮೂರನೆಯದಾಗಿ ಅವರು ಅಗತ್ಯಬಿದ್ದಾಗಲೆಲ್ಲ ಸಿಬಿಐ ಮುಂದೆ ಹಾಜರಾಗಿದ್ದಾರೆ. ನಾಲ್ಕನೆಯದಾಗಿ ವಿದೇಶಕ್ಕೆ ತೆರಳಿ ಪ್ರತಿ ಬಾರಿ ವಾಪಸಾದ ಕೂಡಲೇ ತಮ್ಮ ಪಾಸ್‌ಪೋರ್ಟ್ ಒಪ್ಪಿಸಿದ್ದಾರೆ.
ಮತ್ತಷ್ಟು
ದುಸ್ಸೇಹ್ರಾ ಆಚರಣೆಗೆ ಸರಕಾರಿ ಇಲಾಖೆ ಅಡ್ಡಿ:ಆರೋಪ
ಪೊಲೀಸ್ ರಕ್ಷಣೆ ಕೋರಿದ ಚಿರಂಜೀವಿ ಪುತ್ರಿ
ಭಯೋತ್ಪಾದನೆ: ಭಾರತ-ಪಾಕ್ ಮಾತುಕತೆ
ಸಂಜಯ್ ದತ್ ಮರಳಿ ಯರವಾಡ ಜೈಲಿಗೆ?
ಅಣು ಒಪ್ಪಂದ: ಇಂದು ಸ್ಪಷ್ಟ ನಿರ್ಧಾರ
ನ.2008ರೊಳಗೆ ರಾಮಸೇತು ಯೋಜನೆ