ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
"ಮುನ್ನಾಬಾಯಿ"ಗೆ ಮತ್ತೆ ಜೈಲುವಾಸ
PTI
ಬಾಲಿವುಡ್ ನಟ ಸಂಜಯ್ ದತ್‌ ಎರವಾಡ ಜೈಲಿನಲ್ಲಿ ಸೋಮವಾರ ರಾತ್ರಿಯನ್ನು ಕಳೆದರು. ಎರಡನೆ ಬಾರಿ ಸಂಜಯ್ ದತ್ ವಾಸ್ತವ್ಯಕ್ಕೆ ಜೈಲಿನ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಅವರು ಜೈಲಿನಲ್ಲಿ ಬಿದಿರಿನ ಪೀಠೋಪಕರಣ ಹೆಣೆಯುವ ಕಾಯಕವನ್ನು ಪುನಃ ಮುಂದುವರಿಸಲಿದ್ದಾರೆ.

ಮುಂಬೈ ಸ್ಫೋಟ ಪ್ರಕರಣದ ತೀರ್ಪನ್ನು ದತ್‌ಗೆ ಹಸ್ತಾಂತರಿಸಿದ ಬಳಿಕ ಅವರನ್ನು ಜೈಲಿಗೆ ಕರೆತರಲಾಯಿತು. ಆದರೆ ಈ ಬಾರಿ ಮಾತ್ರ ಬೆಳ್ಳಿತೆರೆಯ ಮುನ್ನಾಬಾಯಿಗೆ ಜೈಲುಗೇಟಿನ ಬಳಿ ಪೊಲೀಸ್ ವ್ಯಾನ್‌ನಿಂದ ಇಳಿಯುತ್ತಿದ್ದಂತೆ ಅಭಿಮಾನಿಗಳ ಸ್ವಾಗತ ಇರಲಿಲ್ಲ. ಜೈಲಿನ ಅಧಿಕಾರಿಗಳಿಗೆ ಜಾಮೀನಿನ ಮೇಲೆ ಬಿಡುಗಡೆಯಾದ ಕೈದಿಯನ್ನು ಪುನಃ ಸೇರಿಸಿಕೊಳ್ಳುವ ಮಾಮೂಲಿ ಪ್ರಕ್ರಿಯೆ ಇದಾಗಿತ್ತು,

ಎಲ್ಲ ಕೈದಿಗಳಿಗೆ ಅನ್ವಯಿಸುವ ಜೈಲಿನ ಕೈಪಿಡಿಯ ನಿಯಮದ ಪ್ರಕಾರ ಎಲ್ಲವನ್ನೂ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು ಎಂದು ಕಾರಾಗೃಹ ಮೂಲಗಳು ಹೇಳಿವೆ.
ಬಿದಿರು ಹೆಣೆಯುವ ಕಾಯಕವನ್ನು ಇಷ್ಟಪಟ್ಟಿದ್ದ ದತ್ ಹೊಸದಾಗಿ ಸಿದ್ಧಿಸಿಕೊಂಡ ಕಾಯಕವನ್ನೇ ಮುಂದುವರಿಸುವರೆಂದು ನಿರೀಕ್ಷಿಸಲಾಗಿದೆ.

ಟಾಡಾ ಕೋರ್ಟ್ ತೀರ್ಪಿನ ವಿರುದ್ಧ ದತ್ ವಕೀಲರು ಮೇಲ್ಮನವಿ ಸಲ್ಲಿಸಲಿದ್ದು, ಸುಪ್ರೀಂಕೋರ್ಟ್ ಜಾಮೀನು ದಯಪಾಲಿಸುವವರೆಗೆ ಬೆಳ್ಳಿತೆರೆಯ ನಟ ಜೈಲಿನಲ್ಲೇ ಕಳೆಯಬೇಕಾಗಿದೆ,
ಮತ್ತಷ್ಟು
ಜಾಮೀನಿಗಾಗಿ ಸು.ಕೋರ್ಟ್ ಮೊರೆ ಹೋಗಲಿರುವ ದತ್
ಪ್ರಧಾನಿ ರಾಜೀನಾಮೆ ನಿರಾಧಾರ
ಕತ್ತೆಗಳ 'ಕೊರತೆ' : ಅಬ್ಬರ ಕಳಕೊಂಡ 'ಗಾರ್ದಭ ಜಾತ್ರೆ'
ಪರಮಾಣು ಒಪ್ಪಂದ: ಮುಂದಿನ ಸಭೆ ನ.16ಕ್ಕೆ
ಟಾಡಾ ಕೋರ್ಟ್‌ಗೆ ಸಂಜಯ್ ದತ್ ಶರಣು
ದಸರಾ ಆಚರಣೆಗೆ ಸರಕಾರಿ ಇಲಾಖೆ ಅಡ್ಡಿ: ಆರೋಪ