ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಶಿಲ್ಲಾಂಗ್: ಗಿಟಾರ್ ವಾದಕರ ಮಹಾಮೇಳ
ಡೋಲು ಬಾಜಕರ ಮಹಾಮೇಳವನ್ನು ಸಂಘಟಿಸಿ ಗಿನಿಸ್ ವಿಶ್ವದಾಖಲೆಗೆ ಸೇರ್ಪಡೆಯಾದ ಶಿಲ್ಲಾಂಗ್ ಈಗ ದಾಖಲೆ ಪುಸ್ತಕಕ್ಕೆ ಮತ್ತೊಮ್ಮೆ ಸೇರಲು ಇನ್ನೊಂದು ಸಾಹಸ ಮಾಡಲಿದೆ. ಅದು ಗಿಟಾರ್ ವಾದಕರ ಮಹಾ ಮೇಳ. ಗಿಟಾರ್ ವಾದಕರು ಒಂದೇ ಕಡೆ ದೊಡ್ಡ ಸಂಖ್ಯೆಯಲ್ಲಿ ವಾದ್ಯಗೋಷ್ಠಿ ನೀಡುವ ಮೂಲಕ ಗಿನ್ನಿಸ್ ದಾಖಲೆಗೆ ಸೇರಲು ಸಜ್ಜಾಗಿದ್ದಾರೆ.

ಕಳೆದ ವರ್ಷ ಒಂದೇ ಬಾರಿಗೆ 7,800 ಡೋಲುಗಾರರ ಮೇಳವನ್ನು ಸಂಘಟಿಸುವ ಮೂಲಕ ಶಿಲ್ಲಾಂಗ್ ವಿಶ್ವದಾಖಲೆ ನಿರ್ಮಿಸಿತ್ತು. ರಾಜ್ಯದಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ಪ್ರವಾಸ ನಿರ್ವಾಹಕರು, ಹೊಟೆಲಿಗರು, ಸಾರಿಗೆ ನಿರ್ವಾಹಕರು ಮತ್ತು ಪೌರರ ತಂಡವನ್ನು ಹೊಂದಿರುವ ಮೇಘಾಲಯ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಈ ಕಾರ್ಯಕ್ರಮವನ್ನು ಆಯೋಜಿಸಿದೆ.

ಶಿಲ್ಲಾಂಗ್ ಒಂದರಿಂದಲೇ 500 ಗಿಟಾರ್ ವಾದಕರು ಈಗಾಗಲೇ ನೊಂದಾಯಿಸಿದ್ದಾರೆ. ನಾವು 2000 ಗಿಟಾರ್ ವಾದಕರನ್ನು ಒಂದೆಡೆ ಸೇರಿಸುವ ಗುರಿ ಇಟ್ಟುಕೊಂಡಿದ್ದರೂ, 2500 ಜನರು ಸೇರುವರೆಂದು ನಿರೀಕ್ಷಿಸಲಾಗಿದೆ.

ಪ್ರಸಕ್ತ ದಾಖಲೆಯು ಅಮೆರಿಕದ ಕನ್ಸಾಸ್ ನಗರದ 1721 ಗಿಟಾರ್ ವಾದಕರ ಹೆಸರಿನಲ್ಲಿದೆ. ಇವರೆಲ್ಲರೂ ಕಳೆದ ಜೂನ್ ನಾಲ್ಕರಂದು "ಸ್ಮೋಕ್ ಆನ್ ದಿ ವಾಟರ್" ರಾಕ್ ಮ್ಯೂಸಿಕ್ ನುಡಿಸಿ ದಾಖಲೆ ನಿರ್ಮಿಸಿದ್ದಾರೆ.

ಮೇಘಾಲಯದ ಎಂಟಿಡಿಎಫ್ ಪ್ರಧಾನ ಕಾರ್ಯದರ್ಶಿ ಮಾವೋರಿಕ್ , ಶಿಲ್ಲಾಂಗ್‌ನಲ್ಲಿ ಬಾಬ್ ಡೈಲಾನ್ ಅವರ ನಾಕಿಂಗ್ ಆನ್ ಹೆವೆನ್ಸ್ ಡೋರ್ ಗಿಟಾರ್ ಸಂಗೀತ ನುಡಿಸಲಾಗುವುದು ಎಂದು ಹೇಳಿ ಮಂಗಳವಾರದಿಂದಲೇ ಅಭ್ಯಾಸ ಆರಂಭವಾಗಲಿದೆ ಎಂದರು.
ಮತ್ತಷ್ಟು
"ಮುನ್ನಾಬಾಯಿ"ಗೆ ಮತ್ತೆ ಜೈಲುವಾಸ
ಜಾಮೀನಿಗಾಗಿ ಸು.ಕೋರ್ಟ್ ಮೊರೆ ಹೋಗಲಿರುವ ದತ್
ಪ್ರಧಾನಿ ರಾಜೀನಾಮೆ ನಿರಾಧಾರ
ಕತ್ತೆಗಳ 'ಕೊರತೆ' : ಅಬ್ಬರ ಕಳಕೊಂಡ 'ಗಾರ್ದಭ ಜಾತ್ರೆ'
ಪರಮಾಣು ಒಪ್ಪಂದ: ಮುಂದಿನ ಸಭೆ ನ.16ಕ್ಕೆ
ಟಾಡಾ ಕೋರ್ಟ್‌ಗೆ ಸಂಜಯ್ ದತ್ ಶರಣು