ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ನಿಗೂಢವಾಗಿ ಸತ್ತ ರಿಜ್ವಾನುರ್ ಪತ್ನಿಯ ತನಿಖೆ
ವಿವಾಹವಾದ ಕೆಲವೇ ದಿನಗಳಲ್ಲಿ ನಿಗೂಢ ಸನ್ನಿವೇಶದಲ್ಲಿ ಮೃತಪಟ್ಟ ಕಂಪ್ಯೂಟರ್ ಗ್ರಾಫಿಕ್ ಶಿಕ್ಷಕ ರಿಜ್ವಾನುರ್ ರೆಹಮಾನ್ ಅವರ ಪತ್ನಿ ಮತ್ತು ಮುಖ್ಯಆರೋಪಿ ಅಶೋಕ್ ತೋಡಿ ಪುತ್ರಿ ಪ್ರಿಯಾಂಕ ತೋಡಿಯನ್ನು ಸಿಬಿಐ ಅಧಿಕಾರಿಗಳು ಮಂಗಳವಾರ ತನಿಖೆಗೆ ಒಳಪಡಿಸಿದರು.ಪ್ರಿಯಾಂಕ ತನಿಖೆಗೆ ಪೂರ್ಣವಾಗಿ ಸಹಕರಿಸಿದ್ದು, ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಸಿಬಿಐ 20ಕ್ಕೂ ಹೆಚ್ಚು ಮಂದಿಯನ್ನು ತನಿಖೆ ನಡೆಸಿದ್ದು, ತನಿಖೆಗೆ ನೆರವಾಗುವ ಅನೇಕ ಸುಳಿವುಗಳು ಸಿಕ್ಕಿವೆ. ಪ್ರತಿಷ್ಠಿತ ಉದ್ಯಮಿ ಅಶೋಕ್ ತೋಡಿ ಅವರ ಪುತ್ರಿಯನ್ನು ವಿವಾಹವಾಗಿದ್ದ ರಿಜ್ವಾನುರ್ ಸೆ.21ರಂದು ರೈಲ್ವೆ ಹಳಿಯಲ್ಲಿ ಸತ್ತುಬಿದ್ದಿರುವುದು ಪತ್ತೆಯಾಗಿತ್ತು.

ರಿಜ್ವಾನುರ್ ಸಾವಿನ ಬಗ್ಗೆ ತನಿಖೆಗೆ ಆದೇಶಿಸಿದ ರಾಜ್ಯಸರ್ಕಾರ ಸಾರ್ವಜನಿಕರ ಆಕ್ರೋಶದ ಬಳಿಕ ನ್ಯಾಯಾಂಗ ತನಿಖೆಗೆ ಆದೇಶ ನೀಡಿತ್ತು. ತಡವಾದ ಕ್ರಮವಾಗಿ ರಾಜ್ಯಸರ್ಕಾರವು ಈ ವಿಷಯಕ್ಕೆ ಸಂಬಂಧಪಟ್ಟಂತೆ ನಗರ ಪೊಲೀಸ್ ಆಯುಕ್ತ ಹಾಗೂ ಇಬ್ಬರು ಉಪಆಯುಕ್ತರು ಸೇರಿದಂತೆ ಐವರು ಪೊಲೀಸ್ ಅಧಿಕಾರಿಗಳನ್ನು ವಜಾ ಮಾಡಿತ್ತು.
ಮತ್ತಷ್ಟು
ಶಿಲ್ಲಾಂಗ್: ಗಿಟಾರ್ ವಾದಕರ ಮಹಾಮೇಳ
"ಮುನ್ನಾಬಾಯಿ"ಗೆ ಮತ್ತೆ ಜೈಲುವಾಸ
ಜಾಮೀನಿಗಾಗಿ ಸು.ಕೋರ್ಟ್ ಮೊರೆ ಹೋಗಲಿರುವ ದತ್
ಪ್ರಧಾನಿ ರಾಜೀನಾಮೆ ನಿರಾಧಾರ
ಕತ್ತೆಗಳ 'ಕೊರತೆ' : ಅಬ್ಬರ ಕಳಕೊಂಡ 'ಗಾರ್ದಭ ಜಾತ್ರೆ'
ಪರಮಾಣು ಒಪ್ಪಂದ: ಮುಂದಿನ ಸಭೆ ನ.16ಕ್ಕೆ