ಸ್ಪರ್ಧಾತ್ಮಕ ರಾಜಕೀಯ ಮತ್ತು ಅಸ್ಪಷ್ಟ ಜನಾದೇಶಗಳಿಂದ ಸರ್ಕಾರಗಳಿಗೆ ಸುಸ್ಪಷ್ಟವಾದ ವಿಷಯಗಳು ಕೂಡ ಕಷ್ಟಕರವಾಗಿ ಪರಿಣಮಿಸಿವೆ ಎಂದು ಪ್ರಧಾನಮಂತ್ರಿ ಮನಮೋಹನ ಸಿಂಗ್ ಮಂಗಳವಾರ ತಿಳಿಸಿದರು.
ಭಾರತ-ಅಮೆರಿಕ ಪರಮಾಣು ಒಪ್ಪಂದದ ಅನುಷ್ಠಾನದ ಬಗ್ಗೆ ಸಮಸ್ಯೆಗಳನ್ನು ಎದುರಿಸುತ್ತಿರುವ ಪ್ರಧಾನಮಂತ್ರಿ ಈ ಬಗ್ಗೆ ಸೂಚ್ಯವಾಗಿ ಹೇಳಿದ್ದಾರೆ. ಕಿನ್ಸೆಸೆ ಮಂಡಳಿ ಸಭೆಯಲ್ಲಿ ಮಾತನಾಡುತ್ತಿದ್ದ ಪ್ರಧಾನಿ ಈ ವಿಷಯ ತಿಳಿಸಿದರು.
ಪರಮಾಣು ಒಪ್ಪಂದದ ಬಗ್ಗೆ ಪ್ರಧಾನಿ ಉಲ್ಲೇಖಿಸದಿದ್ದರೂ, ಒಪ್ಪಂದಕ್ಕೆ ವಾಮಪಕ್ಷಗಳ ತೀವ್ರ ಪ್ರತಿರೋಧದ ನಡುವೆ ಅವರ ಪ್ರತಿಕ್ರಿಯೆ ಮಹತ್ವ ಪಡೆದಿದೆ. ಪರಮಾಣು ಒಪ್ಪಂದದ ಬಗ್ಗೆ ಮಿತ್ರಪಕ್ಷಗಳ ನಿಲುವಿನಿಂದ ತಮ್ಮನ್ನು ಕುಗ್ಗಿಸಿದ ಭಾವನೆ ಉಂಟಾಗಿದೆ ಎಂದು ಪ್ರಧಾನಿ ಹೇಳಿಕೆಯ ನೇಪಥ್ಯದಲ್ಲಿ ಕೂಡ ಅವರ ಪ್ರತಿಕ್ರಿಯೆ ಹೊರಬಿದ್ದಿದೆ.
|