ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ್ದ ಆಪಾದನೆಯ ದೂರಿನ ವಿಚಾರಣೆಗಾಗಿ ಕೋರ್ಟಿನ ಮುಂದೆ ಹಾಜರಾಗಲು ವಿಫಲರಾದ ಬಾಲಿವುಡ್ ನಟ ಅಮೀರ್‌ಖಾನ್ ಅವರ ವಿರುದ್ಧ ಸ್ಥಳೀಯ ನ್ಯಾಯಾಲಯವು ಮಂಗಳವಾರ ಜಾಮೀನು ರಹಿತ ವಾರಂಟ್ ಹೊರಡಿಸಿದೆ.
ಶೈಲೇಂದ್ರ ಶರ್ಮ ಅವರಿಂದ ಅಮೀರ್‌ಖಾನ್ ವಿರುದ್ಧ ನೀಡಲ್ಪಟ್ಟ ದೂರಿನ ಮೇಲೆ ಜೆಎಂಎಫ್ಎಸ್ ಬಿ.ಎಸ್.ಮುವೆಲ್ ಅವರು ವಾರಂಟ್ ಹೊರಡಿಸಿದರು.
ಈ ಮೊದಲು ನ್ಯಾಯಾಲಯವು ಖಾನ್ ಮತ್ತು ಇತರ ಮೂವರಿಗೆ ಜಾಮೀನು ವಾರಂಟ್‌ನ್ನು ನೀಡಿತ್ತು ಆದರೆ ಅವರು ನಿನ್ನೆ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.
ಇಂದೋರ್‌ನಲ್ಲಿ ನಡೆದ ಕಾರ್ ಶೋರೂಂ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರಧ್ವಜಕ್ಕೆ ಅಮೀರ್‌ಖಾನ್ ಅಗೌರವ ತೋರಿದ್ದರು ಎಂದು ಆಪಾದಿಸಿ ದೂರು ಸಲ್ಲಿಸಲಾಗಿತ್ತು.
|